ಶಿವಮೊಗ್ಗ: ಸ್ನೇಹಿತರಿಬ್ಬರ ನಡುವೆ ವೈಯಕ್ತಿಕ ವಿಚಾರಕ್ಕೆ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯವಾದ ಘಟನೆ ಶಿವಮೊಗ್ಗ ಸಮೀಪದ ವಿರುಪಿನಕೊಪ್ಪ ಕ್ಯಾಂಪ್ ನಲ್ಲಿ ನಡೆದಿದೆ.
ತ್ಯಾವರೆಕೊಪ್ಪ ನಿವಾಸಿ ದೇವರಾಜ್(31) ಕೊಲೆಯಾದ ವ್ಯಕ್ತಿ. ದೇವರಾಜ್ ಮತ್ತು ವೆಂಕಟೇಶ್ ಸ್ನೇಹಿತರಾಗಿದ್ದು, ಬುಧವಾರ ಬೆಳಗ್ಗೆ ಇಬ್ಬರ ನಡುವೆ ಗಲಾಟೆಯಾಗಿದೆ. ಗಲಾಟೆ ವಿಕೋಪಕ್ಕೆ ತಿರುಗಿದ್ದು, ದೇವರಾಜ್ ಗೆ ವೆಂಕಟೇಶ ಗುದ್ದಲಿಯಿಂದ ಹೊಡೆದಿದ್ದಾನೆ. ತಲೆಗೆ ಗಂಭೀರ ಪೆಟ್ಟು ಬಿದ್ದು ಸ್ಥಳದಲ್ಲೇ ದೇವರಾಜ್ ಮೃತಪಟ್ಟಿದ್ದಾನೆ.
ಶಿವಮೊಗ್ಗ ಗ್ರಾಮಾಂತರ ಠಾಣೆ ಪೊಲೀಸರು ಪರಿಶೀಲನೆ ನಡೆಸಿದ್ದು, ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.