ಎಳನೀರು ದೇಹದ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಈಗಂತೂ ಬೇಸಿಗೆ ಕಾಲ ಆಗಿರೋದ್ರಿಂದ ಬಹುತೇಕ ಮಂದಿ ಎಳನೀರನ್ನ ಸೇವನೆ ಮಾಡ್ತಾರೆ. ಈ ಎಳನೀರು ತೂಕ ಇಳಿಕೆ ಕಾರ್ಯದಲ್ಲೂ ಪ್ರಮುಖ ಪಾತ್ರ ವಹಿಸುತ್ತೆ. ಇದರಲ್ಲಿ ವಿಟಾಮಿನ್, ಪೊಟ್ಯಾಷಿಯಂ, ಫೈಬರ್, ಕ್ಯಾಲ್ಶಿಯಂ, ಮ್ಯಾಗ್ನಿಷಿಯಂ ಹಾಗೂ ಮಿನರಲ್ ಅಡಗಿದೆ. ಇದೇ ಕಾರಣಕ್ಕೆ ಎಳನೀರು ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು.
ತೆಂಗಿನಕಾಯಿಯಲ್ಲಿ 94 ಪ್ರತಿಶತ ನೀರಿದೆ. ಇದರಲ್ಲಿ ಕೊಬ್ಬಿನ ಅಂಶ ತುಂಬಾನೇ ಕಡಿಮೆ. ಎಳನೀರಿನಲ್ಲಿ 250 ಎಂಎಲ್ ಜೀವಸತ್ವ ಅಡಗಿದೆ.
ಕಿಡ್ನಿ ಕಲ್ಲಿನ ಸಮಸ್ಯೆ ಹೊಂದಿರುವವರಿಗೆ ವೈದ್ಯರೇ ಎಳನೀರನ್ನ ಸೇವಿಸಿ ಅಂತಾ ಸಲಹೆ ನೀಡ್ತಾರೆ. ಇದರಿಂದ ಕಿಡ್ನಿ ಕಲ್ಲು ಮೂತ್ರದ ಮೂಲಕ ಹೊರ ಹೋಗುತ್ತೆ . ಕಿಡ್ನಿಯಲ್ಲಿರುವ ಕಲ್ಲನ್ನ ಕರಗಿಸೋ ಸಾಮರ್ಥ್ಯ ಎಳನೀರಿಗಿದೆ.
ಬೇಸಿಗೆ ಕಾಲದಲ್ಲಿ ನೀವು ಎಳನೀರನ್ನ ಕುಡಿದಷ್ಟೂ ಒಳ್ಳೆಯದು. ಇದು ನಿಮ್ಮ ದೇಹದಲ್ಲಿ ಗ್ಲುಕೋಸ್ ಪ್ರಮಾಣವನ್ನ ಸರಿದೂಗಿಸೋದ್ರ ಜೊತೆಗೆ ನಿಮ್ಮ ದೇಹದಲ್ಲಿ ನಿರ್ಜಲೀಕರಣ ಸಮಸ್ಯೆ ಉಂಟಾಗದಂತೆ ಕಾಳಜಿ ವಹಿಸುತ್ತೆ.
ಆಸಿಡಿಟಿ, ಅಲ್ಸರ್, ಊರಿಯೂತದಂತಹ ಸಮಸ್ಯೆಗಳಿಗೂ ಎಳನೀರಿನ ಸೇವನೆ ತುಂಬಾನೇ ಸಹಕಾರಿ. ಇದು ಮಾತ್ರವಲ್ಲದೇ ಎಳನೀರಿನಲ್ಲಿರುವ ವಿಟಾಮಿನ್ ಸಿ, ಮ್ಯಾಗ್ನಿಷಿಯಂ ಹಾಗೂ ಪೊಟ್ಯಾಷಿಯಂ ಅಂಶ ರಕ್ತದೊತ್ತಡವನ್ನ ಸಮತೋಲನದಲ್ಲಿ ಇರಿಸುತ್ತೆ.