ಮಂಡ್ಯ: ಆಸ್ತಿ ನೋಂದಣಿಯ ನಂತರ ಯಾಮಾರಿಸಲು ಯತ್ನಿಸಿದವನಿಗೆ ಸಾರ್ವಜನಿಕರು ಧರ್ಮದೇಟು ನೀಡಿದ ಘಟನೆ ಮಂಡ್ಯದ ಉಪ ನೋಂದಣಾಧಿಕಾರಿ ಕಚೇರಿ ಬಳಿ ನಡೆದಿದೆ.
ನೋಟುಗಳ ಮಧ್ಯೆ ಬಿಳಿ ಹಾಳೆ ಇಟ್ಟು ಯಾಮಾರಿಸಿದವನಿಗೆ ಜನರು ಗೂಸಾ ನೀಡಿದ್ದಾರೆ. ಸೈಯದ್ ಅಮೀನ್ ಎಂಬಾತನಿಗೆ ಜನ ಧರ್ಮದೇಟು ನೀಡಿದ್ದಾರೆ. ಕಾಳೇನಹಳ್ಳಿಯ ಉಮೇಶ್ ಎಂಬುವರಿಂದ ಸೈಯದ್ ಅಮೀನ್ ಮೂರು ಗುಂಟೆ ಭೂಮಿ ಖರೀದಿಸಿದ್ದ.
ಮಂಡ್ಯ ಉಪನೋಂದಣಾಧಿಕಾರಿ ಕಚೇರಿಯಲ್ಲಿ ನೋಂದಣಿಯಾಗಿತ್ತು. ಭೂಮಿ ರಿಜಿಸ್ಟ್ರೇಷನ್ ನಂತರ ಆರೋಪಿ ಹಣ ನೀಡುವಾಗ ನೋಟುಗಳ ಮಧ್ಯೆ ಬಿಳಿ ಹಾಳೆಗಳನ್ನು ಇಟ್ಟು ವಂಚಿಸಿದ್ದ. ನೋಟಿನ ಕಂತೆಗಳ ನಡುವೆ ಬಿಳಿ ಹಾಳೆ ಇಟ್ಟು ಯಾಮಾರಿಸಿದ್ದು, ಸೈಯದ್ ವಂಚನೆ ಗೊತ್ತಾಗುತ್ತಿದ್ದಂತೆ ಆತನನ್ನು ಹಿಡಿದು ಜನ ಥಳಿಸಿಸಿದ್ದಾರೆ. ವಂಚಕ ಸೈಯದ್ ನನ್ನು ಮಂಡ್ಯದ ಪಶ್ಚಿಮ ಠಾಣೆ ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ.