ಹೈದರಾಬಾದ್: ಶೈಕ್ ಪೇಟ್ ಪ್ರದೇಶದಲ್ಲಿನ ಗುಡಿಸಲಿನಲ್ಲಿ ಬೀದಿ ನಾಯಿಯೊಂದು ದಾಳಿ ಮಾಡಿದ್ದರಿಂದ ಗಾಯಗೊಂಡ ನಾಲ್ಕು ತಿಂಗಳ ಗಂಡು ಮಗು ಸಾವನ್ನಪ್ಪಿದೆ.
ಕೂಲಿ ಕಾರ್ಮಿಕರಾಗಿರುವ ಮಗುವಿನ ಪೋಷಕರು ತೊಟ್ಟಿಲಲ್ಲಿ ಮಗು ಬಿಟ್ಟು ಕೂಲಿ ಕೆಲಸಕ್ಕೆ ಹೋಗಿದ್ದ ಸಂದರ್ಭದಲ್ಲಿ ಘಟನೆ ನಡೆದಿದೆ.
ಡಿಸೆಂಬರ್ 8 ರಂದು ಮೂರು ಬೀದಿ ನಾಯಿಗಳು ಗುಡಿಸಲಿನ ಬಳಿ ಹೋಗಿವೆ. ಒಂದು ನಾಯಿ ಬಾಗಿಲಿಲ್ಲದ ಗುಡಿಸಲಿನೊಳಗೆ ಹೋಗಿ ಮಗುವಿನ ಮುಖ ಮತ್ತು ಹಣೆಯ ಮೇಲೆ ಕಚ್ಚಿದೆ ಎಂದು ನಾಗರಿಕ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮಗುವನ್ನು ಇಲ್ಲಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾಗ ಭಾನುವಾರ ಮೃತಪಟ್ಟಿದ್ದಾನೆ. ಬಾಲಕನ ಪೋಷಕರು ತೆಲಂಗಾಣದ ಮಹಬೂಬ್‌ನಗರ ಜಿಲ್ಲೆಯವರು.
ಘಟನೆಯ ನಂತರ, ಮಾರ್ಗಸೂಚಿಗಳ ಪ್ರಕಾರ ಸುಮಾರು 20 ಬೀದಿನಾಯಿಗಳನ್ನು ಈ ಪ್ರದೇಶದಲ್ಲಿ ಹಿಡಿಯಲಾಯಿತು. ಇದೇ ಫೆಬ್ರವರಿ 19 ರಂದು ನಗರದ ಅಂಬರ್‌ಪೇಟೆಯಲ್ಲಿ ಬೀದಿ ನಾಯಿಗಳ ಹಿಂಡು ನಾಲ್ಕು ವರ್ಷದ ಬಾಲಕನ ಮೇಲೆ ದಾಳಿ ಮಾಡಿ ಕೊಂದು ಹಾಕಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.