
2000ದ ಇಸವಿಯಲ್ಲಿ ಭಾರತ ಮತ್ತು ಕೀನ್ಯಾ ನಡುವಣ ನಡೆದ ಏಕದಿನ ಪಂದ್ಯದ ಮೂಲಕ ಕ್ರಿಕೆಟ್ ಲೋಕಕ್ಕೆ ಪಾದಾರ್ಪಣೆ ಮಾಡಿದ ಇವರು ಏಕದಿನ ಕ್ರಿಕೆಟ್ ನಲ್ಲಿ ತಮ್ಮ ಸ್ಪೋಟಕ ಬ್ಯಾಟಿಂಗ್ ನಿಂದಲೇ ಹೆಸರುವಾಸಿಯಾದರು. ಬಳಿಕ 2003ರಂದು ಭಾರತ ಹಾಗೂ ನ್ಯೂಜಿಲೆಂಡ್ ನಡುವೆ ನಡೆದ ಟೆಸ್ಟ್ ಸರಣಿಯಲ್ಲಿ ಅವಕಾಶ ಪಡೆದರು.
2007ರ ಟಿ20 ವಿಶ್ವಕಪ್ ನಲ್ಲಿ ಭಾರತ ಹಾಗೂ ಇಂಗ್ಲೆಂಡ್ ಪಂದ್ಯದಲ್ಲಿ 6 ಎಸೆತಗಳಲ್ಲಿ ಆರು ಸಿಕ್ಸರ್ ಸಿಡಿಸುವ ಮೂಲಕ ಹೊಸ ದಾಖಲೆ ಬರೆದಿದ್ದರು. ಟಿ20 ಕ್ರಿಕೆಟ್ ನಲ್ಲಿ ಈ ರೀತಿಯು ಬ್ಯಾಟಿಂಗ್ ಮಾಡಬಹುದು ಎಂದು ತೋರಿಸಿಕೊಟ್ಟ ಯುವರಾಜ್ ಸಿಂಗ್ ಇಂದಿಗೂ ಕ್ರಿಕೆಟ್ ಪ್ರೇಮಿಗಳ ಫೇವರೆಟ್ ಆಗಿದ್ದಾರೆ. ಇಂದು ಸಾಮಾಜಿಕ ಜಾಲತಾಣದಲ್ಲಿ ಹಲವಾರು ಹಿರಿಯ ಹಾಗೂ ಯುವ ಕ್ರಿಕೆಟಿಗರು ಯುವರಾಜ್ ಸಿಂಗ್ ಅವರಿಗೆ ಹುಟ್ಟು ಹಬ್ಬದ ಶುಭಾಶಯ ತಿಳಿಸಿದ್ದಾರೆ.
ಯುವರಾಜ್ ಸಿಂಗ್ ಆರು ಎಸೆತಗಳಲ್ಲಿ ಆರು ಸಿಕ್ಸರ್ ಬಾರಿಸಿದ ವಿಡಿಯೋ ಇಲ್ಲಿದೆ ನೋಡಿ;
Many many happy returns of the day brother. Your indomitable spirit is an inspiration for the country! Loads of love always ❤️❤️ @YUVSTRONG12 pic.twitter.com/UaCcr0Ymr2
— Gautam Gambhir (@GautamGambhir) December 12, 2024
4️⃣0️⃣2️⃣ international games 👌
1️⃣1️⃣7️⃣7️⃣8️⃣ international runs 💪
1️⃣4️⃣8️⃣ international wickets 👍
2007 ICC World T20 & 2011 ICC World Cup-winner 🏆 🏆Birthday wishes to the legendary Yuvraj Singh! 👏 🎂#TeamIndia | @YUVSTRONG12 pic.twitter.com/zO6DjBiK5U
— BCCI (@BCCI) December 12, 2024