ಬೆಂಗಳೂರು: ಅರಣ್ಯ ಪ್ರದೇಶ ನಾಶವಾಗುತ್ತಿರುವ ಆತಂಕದ ನಡುವೆ ದೇಶಾದ್ಯಂತ 5516 ಚ.ಕಿ.ಮೀ. ಅರಣ್ಯ ಪ್ರದೇಶ ವಿಸ್ತಾರವಾಗಿದೆ ಎನ್ನುವ ಸಂತಸದ ಸುದ್ದಿ ಸಿಕ್ಕಿದೆ.
ರಾಜ್ಯಗಳ ಅರಣ್ಯ ವರದಿಯನ್ನು ಭಾರತ ಅರಣ್ಯ ಸಮೀಕ್ಷೆಯಲ್ಲಿ ತಿಳಿಸಲಾಗಿದ್ದು, ಕರ್ನಾಟಕದಲ್ಲಿ 1180 ಚ.ಕಿ.ಮೀ. ಅರಣ್ಯ ಪ್ರದೇಶ ವಿಸ್ತರಣೆಯಾಗಿದೆ. ದೇಶದಲ್ಲಿ ಎರಡನೇ ಸ್ಥಾನ ದೊರೆತಿದೆ. ಆಂಧ್ರಪ್ರದೇಶದಲ್ಲಿ 1637 ಚ.ಕಿ.ಮೀ. ಅರಣ್ಯ ಪ್ರದೇಶ ವಿಸ್ತರಣೆಯಾಗಿದ್ದು ಮೊದಲ ಸ್ಥಾನದಲ್ಲಿದೆ. ಕೇರಳದಲ್ಲಿ 932 ಚ.ಕಿ.ಮೀ., ಹಿಮಾಚಲ ಪ್ರದೇಶದಲ್ಲಿ 343 ಚ.ಕಿ.ಮೀ. ಅರಣ್ಯ ಪ್ರದೇಶ ವಿಸ್ತರಣೆಯಾಗಿದೆ.
ಈಶಾನ್ಯ ರಾಜ್ಯ ಮಣಿಪುರ, ಅರುಣಾಚಲ ಪ್ರದೇಶದಲ್ಲಿ ಅರಣ್ಯ ಕಡಿಮೆಯಾಗಿದೆ. ಅರಣ್ಯೀಕರಣ ಚಟುವಟಿಕೆ, ಸಂರಕ್ಷಣಾ ಕ್ರಮಗಳು, ಸಾಂಪ್ರದಾಯಿಕ ಕಾಡುಗಳಲ್ಲಿ ವರ್ಧಿತ ರಕ್ಷಣಾ ಕ್ರಮಗಳು ಅರಣ್ಯ ವಿಸ್ತರಣೆಗೆ ಕಾರಣವಾಗಿದೆ ಎಂದು ಹೇಳಲಾಗಿದೆ.