ಈಗಿನ ಯುವಜನತೆಯಲ್ಲಿ ಸಾಮಾನ್ಯವಾಗಿ ಎಲ್ಲರನ್ನೂ ಕಾಡುತ್ತಿರುವ ಸಮಸ್ಯೆಗಳಲ್ಲಿ ಸೊಂಟನೋವೂ ಒಂದು. ಸೊಂಟನೋವು ಅನುಭವಿಸಲಾಗದ ನೋವು. ನಿಲ್ಲಲು, ಕುಳಿತುಕೊಳ್ಳಲು ಸಾಧ್ಯವಾಗುವುದಿಲ್ಲ. ಯಮಯಾತನೆಯಾಗುತ್ತದೆ. ಸೋಂಟ ನೋವಿರುವವರು ಕೆಲವೊಂದು ಆಹಾರವನ್ನು ಎಂದೂ ಸೇವನೆ ಮಾಡಬಾರದು.
ಕೆಲವು ಆಹಾರ ಪದಾರ್ಥಗಳ ಸೇವನೆಯಿಂದ ಗ್ಯಾಸ್, ಪಿತ್ತ, ವಾತ ಮುಂತಾದವು ಹೆಚ್ಚಾಗುತ್ತದೆ. ಸೊಂಟ ನೋವು ಬಂದಾಗ ಕೆಲವು ಪಥ್ಯಗಳನ್ನು ಮಾಡಬೇಕು.
ನಾವು ತಿನ್ನುವ ಕೆಲವು ಆಹಾರ ಪದಾರ್ಥಗಳು ನಮ್ಮ ಶರೀರಕ್ಕೆ ಪೌಷ್ಠಿಕವಾದರೆ ಇನ್ಕೆಲವು ಆಹಾರಗಳು ನಮ್ಮಲ್ಲಿರುವ ರೋಗನಿರೋಧಕ ಶಕ್ತಿಯನ್ನೇ ಕುಗ್ಗಿಸುತ್ತದೆ. ಇದರಿಂದ ಶರೀರದ ನೋವುಗಳು ಹೆಚ್ಚುತ್ತವೆ. ಅಂತಹ ಕೆಲವು ಆಹಾರಗಳು ಹೀಗಿವೆ..
ಬ್ರೆಡ್ : ಪಿಜ್ಜಾ, ಬ್ರೆಡ್ ಗಳಲ್ಲಿ ಅಧಿಕ ಪ್ರಮಾಣದ ರಿಫೈಂಡ್ ಆಯಿಲ್ ಇರುತ್ತದೆ. ಇದರಿಂದ ನಿಮ್ಮಲ್ಲಿರುವ ಇನ್ಸುಲಿನ್ ಪ್ರಮಾಣ ಒಮ್ಮೆಲೇ ಕಡಿಮೆಯಾಗಿ ನಿಮಗೆ ಸೊಂಟನೋವು ಕಾಣಿಸಬಹುದು.
ಸಿಹಿ : ಸಕ್ಕರೆಯಿಂದ ತಯಾರಾದ ಖಾದ್ಯಗಳೆಲ್ಲವೂ ಸೊಂಟನೋವಿಗೆ ಒಳ್ಳೆಯದಲ್ಲ. ಇವು ತೂಕವನ್ನು ಹೆಚ್ಚಿಸಿ ಶರೀರದ ನೋವುಗಳು ಉಲ್ಬಣವಾಗುವಂತೆ ಮಾಡುತ್ತವೆ.
ಪಿಜ್ಜಾ ಮತ್ತು ಕಾರ್ಬೊನೇಟೆಡ್ ಡ್ರಿಂಕ್ಸ್: ಸ್ಯಾಚುರೇಟೆಡ್ ಫ್ಯಾಟ್ ಮತ್ತು ಟ್ರಾನ್ಸ್ ಫ್ಯಾಟ್ ಉಳ್ಳ ಖಾದ್ಯಗಳಿಂದ ದೂರವಿರಿ. ಕಾರ್ಬೊನೇಟೆಡ್ ಡ್ರಿಂಕ್ಸ್ ನಲ್ಲಿ ಕೆಮಿಕಲ್ ಇರುತ್ತದೆ. ಇದರ ಸೇವನೆಯಿಂದ ನಿಮ್ಮ ಶರೀರದಲ್ಲಿ ಎಸಿಡ್ ಪ್ರಮಾಣ ಹೆಚ್ಚಾಗಿ ನೋವು ಹೆಚ್ಚುತ್ತದೆ.