ಆಹಾರ ಜೀವನದ ಮೂಲಭೂತ ಅಗತ್ಯವಾಗಿದೆ. ವ್ಯಕ್ತಿ ವಿದೇಶಿ ಆಹಾರವನ್ನು ಎಷ್ಟೇ ತಿನ್ನಲಿ ಹೊಟ್ಟೆ ತುಂಬೋದು ರೊಟ್ಟಿ -ಅನ್ನದಿಂದ ಮಾತ್ರ. ಬೇರೆಯವರಿಗೆ ಆಹಾರ ನೀಡುವುದರಿಂದ ಪುಣ್ಯ ಪ್ರಾಪ್ತಿಯಾಗುತ್ತದೆ. ಸಮಸ್ಯೆಗಳು ಶಮನವಾಗುತ್ತವೆ.
ಜೀವನದಲ್ಲಿ ಎಂತದೇ ಕಷ್ಟ ಬರಲಿ, ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕೆಲವೊಂದು ಉಪಾಯಗಳನ್ನು ಮಾಡಿದ್ರೆ ನಿಂತ ಕೆಲಸ ಪೂರ್ಣಗೊಳ್ಳುತ್ತದೆ. 33 ಕೋಟಿ ದೇವತೆಗಳನ್ನು ಸಂತೃಪ್ತಗೊಳಿಸಲು ಮನೆಯಲ್ಲಿ ಮಾಡಿದ ಮೊದಲ ರೊಟ್ಟಿಯನ್ನು ಹಸುವಿಗೆ ನೀಡಬೇಕು. ಊಟ ಮಾಡುವ ಮೊದಲು ದನ, ನಾಯಿ, ಕಾಗೆಗೆ ಒಂದು ಭಾಗ ನೀಡಬೇಕು. ಇದ್ರಿಂದಾಗಿ ಎಂದೂ ಆರ್ಥಿಕ ಸಮಸ್ಯೆ ಎದುರಾಗುವುದಿಲ್ಲ.
ಮನೆಯ ಬಡತನ ದೂರ ಮಾಡಲು ಬೆಳಿಗ್ಗೆ ತಯಾರಿಸಿದ ಮೊದಲ ರೊಟ್ಟಿಯಲ್ಲಿ ನಾಲ್ಕು ಭಾಗ ಮಾಡಿ. ಒಂದು ಭಾಗವನ್ನು ಹಸುವಿಗೆ, ಎರಡನೇ ಭಾಗವನ್ನು ಕಪ್ಪು ನಾಯಿಗೆ ಮೂರನೇ ಭಾಗವನ್ನು ಕಾಗೆಗೆ ಹಾಗೂ ನಾಲ್ಕ ನೇ ಭಾಗವನ್ನು ರಸ್ತೆ ಕೂಡುವ ಜಾಗದಲ್ಲಿಟ್ಟು ಬನ್ನಿ.
ಶನಿ, ರಾಹು ಹಾಗೂ ಕೇತುವಿನ ದೋಷವಿರುವವರು ಕೊನೆಯ ರೊಟ್ಟಿಗೆ ಸಾಸಿವೆ ಎಣ್ಣೆಯನ್ನು ಹಾಕಿ ಕಪ್ಪು ನಾಯಿಗೆ ನೀಡಿ.
ನಾಯಿಗೆ ರೊಟ್ಟಿ ನೀಡುವುದರಿಂದ ಮಕ್ಕಳಿಗೆ ಸಂಬಂಧಿಸಿದಂತೆ ಕಾಡುವ ಸಮಸ್ಯೆ ದೂರವಾಗಲಿದೆ.