ಸಾಮಾನ್ಯವಾಗಿ ಬಟ್ಟೆ ವಿಚಾರದಲ್ಲಿ ನೀವು ಮಾಡುವ ಕೆಲವು ತಪ್ಪುಗಳು ನಿಮ್ಮ ಉಡುಪನ್ನೇ ಹಾಳು ಮಾಡಬಹುದು. ಅಂಥ ತಪ್ಪುಗಳು ಯಾವುವು ಎಂದಿರಾ?
ಎಲ್ಲಾ ಬಟ್ಟೆಯನ್ನು ಒಂದೇ ದಿನ ತೊಳೆಯಲೆಂದು ರಾಶಿ ಹಾಕದಿರಿ. ನಿಮ್ಮ ಒಂದು ಭಾನುವಾರವೂ ಇದರಿಂದ ಹಾಳಾಗಬಹುದು. ಎರಡು ದಿನಕ್ಕೊಮ್ಮೆಯಾದರೂ ಬಟ್ಟೆ ಒಗೆದು ಹಾಕಿ.
ವಾರಗಳ ಕಾಲ ಇಟ್ಟ ಉಡುಪನ್ನು ಒಂದೇ ದಿನ ವಾಷಿಂಗ್ ಮೆಷಿನ್ ಗೆ ಹಾಕುವಾಗ ಅದರಿಂದ ಮುಗ್ಗುಲು ಹಿಡಿದ ವಾಸನೆ ಬರುವುದು ಸಾಮಾನ್ಯ. ಯಾವ ಪೌಡರ್, ಲಿಕ್ವಿಡ್ ಬಳಸಿದರೂ ಇದು ದೂರಾಗದು, ಅಂಥ ಸಂದರ್ಭದಲ್ಲಿ ಉಡುಪುಗಳನ್ನು ಒಮ್ಮೆ ನೀರಿನಲ್ಲಿ ಹಿಂಡಿ ವಾಸನೆ ದೂರವಾಗಿಸಿ ಬಳಿಕ ವಾಷಿಂಗ್ ಮೆಷಿನ್ ಗೆ ಹಾಕಿ.
ನೀವು ಬಟ್ಟೆ ಸ್ವಚ್ಛಗೊಳಿಸಲು ನೀಡುವಷ್ಟೇ ಆದ್ಯತೆಯನ್ನು ಉಡುಪುಗಳ ಸ್ವಚ್ಛತೆಗೂ ನೀಡಲು ಮರೆಯದಿರಿ. ಇಲ್ಲವಾದರೆ ಇದರ ವಾಸನೆ ಬಟ್ಟೆಗಳಿಗೂ ಅಂಟಿಕೊಳ್ಳಬಹುದು. ಹಾಗಾಗಿ ಮೆಷಿನ್ ಗಳನ್ನು ಸ್ವಚ್ಛಗೊಳಿಸಿ. ಲಿಕ್ವಿಡ್ ಡಿಟರ್ಜೆಂಟ್ ಬಳಸುವುದು ಹೆಚ್ಚು ಒಳ್ಳೆಯದು.
ಬಿಳಿಬಟ್ಟೆಯನ್ನು ಪ್ರತ್ಯೇಕವಾಗಿ ತೊಳೆಯಿರಿ. ಇತರ ಬಣ್ಣದ ಉಡುಪುಗಳ ಜೊತೆ ಸೇರಿಸಿ ಇದನ್ನು ತೊಳೆದಾಗ ಅವುಗಳ ಬಣ್ಣ ಅಂಟುವ ಸಾಧ್ಯತೆ ಇದೆ. ಹಾಗಾಗಿ ಬಿಳಿ ಬಟ್ಟೆಗಳನ್ನು ಹ್ಯಾಂಡ್ ವಾಶ್ ಮಾಡುವುದೇ ಒಳ್ಳೆಯದು.
ಒಣಗಿಸುವಾಗ ಒಪ್ಪವಾಗಿ ಹಗ್ಗದ ಮೇಲೆ ಹಾಕಿ, ಬಿಸಿಲಿನಲ್ಲಿ ಒಣಗಿಸಿದರೆ ಸೂಕ್ತ ಆದರೆ ಹೆಚ್ಚು ಹೊತ್ತು ಪ್ರಖರ ಬಿಸಿಲಿನಲ್ಲಿ ಬಿಡಬೇಡಿ ಒಣಗಿದ ತಕ್ಷಣ ತೆಗೆದು ಮಡಚಿ ಇಡಿ.