ಮಗುವಿಗೆ 6 ತಿಂಗಳಾಗುವ ತನಕ ತಾಯಿಯ ಎದೆಹಾಲನ್ನು ಮಾತ್ರ ನೀಡಲಾಗುತ್ತದೆ. ಇದು ಮಗುವಿನ ಆರೋಗ್ಯಕ್ಕೆ ಒಳ್ಳೆಯದು. ಆದರೆ 6 ತಿಂಗಳ ನಂತರ ಘನ ಆಹಾರವನ್ನು ನೀಡಲಾಗುತ್ತದೆ. ಈ ಸಮಯದಲ್ಲಿ ನೀವು ಕೆಲವು ಸಲಹೆಗಳನ್ನು ಪಾಲಿಸಿದರೆ ಮಗುವಿನ ಆರೋಗ್ಯಕ್ಕೆ ಒಳ್ಳೆಯದು.
ಮಗುವು ಆಟಿಕೆಗಳನ್ನು ಕಚ್ಚಲು ಶುರುಮಾಡಿದಾಗ, ಕುಳಿತುಕೊಳ್ಳಲು ಪ್ರಯತ್ನಿಸುವಾಗ ಅಥವಾ ಆಹಾರವನ್ನು ಸೇವಿಸಲು ಬಾಯಿ ತೆರೆಯುವಾಗ ಅವರಿಗೆ ಘನ ಆಹಾರವನ್ನು ನೀಡಿ. ಇವು ಅವರಿಗೆ ಘನ ಆಹಾರ ತಿನ್ನುವ ಬಯಕೆಯನ್ನು ಸೂಚಿಸುತ್ತದೆ.
ಹಾಗೇ ಮಗು ಘನ ಆಹಾರವನ್ನು ಸೇವಿಸುವಾಗ ಅವರಿಗೆ ಸೇಬು ಅಥವಾ ಸೌತೆಕಾಯಿಯ ಪೀಸ್ ಅನ್ನು ಕೊಡಿ. ಇದರಿಂದ ಮಕ್ಕಳು ಘನ ಆಹಾರವನ್ನು ತಿನ್ನುವ ಅಭ್ಯಾಸ ಮಾಡಿಕೊಳ್ಳುತ್ತಾರೆ.
ಹಾಗೇ ಮಗುವಿಗೆ ಒಂದೇ ಬಾರಿಗೆ ಒಂದು ಆಹಾರವನ್ನು ನೀಡಿ. ನಂತರ ಒಂದು ವಾರದ ನಂತರ ಮತ್ತೊಂದು ಆಹಾರವನ್ನು ಪರಿಚಯಿಸಿ. ಇಲ್ಲವಾದರೆ ಅದರಿಂದ ಅಲರ್ಜಿಯಾಗಬಹುದು. ಮತ್ತು ಅಜೀರ್ಣ ಸಮಸ್ಯೆ ಕಾಡಬಹುದು. ಹಾಗೇ ತರಕಾರಿ, ಹಣ್ಣುಗಳ ಜೊತೆಗೆ ಧಾನ್ಯಗಳನ್ನು ನೀಡಿ.