ಪುದೀನಾ ಬೆಳೆಸಲು ಫಾಲೋ ಮಾಡಿ ಈ ಟಿಪ್ಸ್

ಪುದೀನಾ ಸೊಪ್ಪು ಮನೆಯಲ್ಲಿ ಒಂದಿಲ್ಲೊಂದು ಅಡುಗೆಗೆ ಉಪಯೋಗಿಸುತ್ತೇವೆ. ಹೊರಗಡೆಯಿಂದ ತಂದು ಎರಡೇ ದಿನದಲ್ಲಿ ಈ ಸೊಪ್ಪು ಬಾಡಿ ಹೋಗುತ್ತದೆ. ಹಾಗಂತ ಮನೆಯಲ್ಲಿರುವ ಪಾಟ್ ಗೆ ಇದನ್ನು ಹಾಕಿ ಬೆಳೆಯೋಣವೆಂದರೆ ಸರಿಯಾಗಿ ಬೆಳೆಯುವುದಿಲ್ಲ ಎಂಬ ಚಿಂತೆ ಕೆಲವರದ್ದು.

ಹಾಗಾದ್ರೆ ತಡವೇಕೆ…? ಇಲ್ಲಿದೆ ನೋಡಿ ಪುದೀನಾ ಬೆಳೆಯುವಾಗ ಅನುಸರಿಬೇಕಾದ ಟಿಪ್ಸ್.

ಮನೆಯ ಹಿತ್ತಲಿನಲ್ಲಿಯೋ ಅಥವಾ ಟೆರೆಸ್ ಮೇಲೆ ಪಾಟ್ ನಲ್ಲಿಟ್ಟು ಪುದೀನಾ ಬೆಳೆಯುವಿರಾದರೆ ಅದಕ್ಕೆ ಬೆಳಿಗ್ಗಿನ ಸೂರ್ಯನ ಬಿಸಿಲು ಹಾಗೇ ಸ್ವಲ್ಪ ಪ್ರಮಾಣದಲ್ಲಿ ಸಂಜೆಯ ಬಿಸಿಲು ತಾಕುವಂತೆ ಇಡಿ. ಇನ್ನು ಪುದೀನಾ ಹೂ ಬಿಡುವ ಮೊದಲೇ ಇದನ್ನು ಕತ್ತರಿಸಿ ಸ್ವಲ್ಪ ತಡವಾಗಿ ಕತ್ತರಿಸುವಿರಾದರೆ ಪುದೀನಾ ಗಿಡದಲ್ಲಿ ಹೂ ಬಿಡಲು ಆರಂಭಿಸುತ್ತಿದ್ದಂತೆ ಅದನ್ನು ಚಿವುಟಿ ತೆಗೆಯಿರಿ.

ಇನ್ನು ಕೆಲವರು ಮನೆಯ ಒಳಗಡೆ ಕೂಡ ಇದನ್ನು ಬೆಳೆಸುತ್ತಾರೆ. ಹಾಗೇ ಮಾಡುವಿರಾದರೆ ಬೆಳಿಗ್ಗಿನ ಬಿಸಿಲು ಇದಕ್ಕೆ ತಾಕುವಂತೆ ಇಡಿ. ಮಾಧ್ಯಾಹ್ನದ ಉರಿಬಿಸಿಲು ಬೇಡ. ಹಾಗೇ ಈ ಗಿಡದಲ್ಲಿ ತೇವಾಂಶ ಇರುವ ಹಾಗೇ ನೋಡಿಕೊಳ್ಳಿ. ಒಣಗುವುದಕ್ಕೆ ಬಿಡಬೇಡಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read