ಮನೆಯಲ್ಲಿ, ಹೋಟೆಲ್ ಊಟದ ವೇಳೆ ಪಿಂಗಾಣಿ ಪಾತ್ರೆಗಳನ್ನು ಬಳಸುತ್ತಾರೆ. ಇವು ದುಬಾರಿ, ಐಶಾರಾಮಿ ಪಾತ್ರೆಗಳಾಗಿದ್ದು ಅದು ತುಂಬಾ ಚೆನ್ನಾಗಿ ಕಾಣಿಸುತ್ತದೆ. ಆದರೆ ಇದನ್ನು ತುಂಬಾ ಎಚ್ಚರಿಕೆಯಿಂದ ಬಳಸಬೇಕು. ಇಲ್ಲವಾದರೆ ಒಡೆದು ಹೋಗುತ್ತದೆ. ಹಾಗಾಗಿ ಪಿಂಗಾಣಿ ಪಾತ್ರೆಗಳು ಒಡೆಯದಂತೆ ಕಾಪಾಡಲು ಈ ಕ್ರಮಗಳನ್ನು ಅನುಸರಿಸಿ.
ಸಾಮಾನ್ಯವಾಗಿ ಮಹಿಳೆಯರು ಸ್ಥಳಾವಕಾಶದ ಕೊರತೆಯಿಂದ ಪಾತ್ರೆಗಳನ್ನು ಒಂದರ ಮೇಲೆ ಇನ್ನೊಂದನ್ನು ಜೋಡಿಸುತ್ತಾರೆ. ಇದು ಪಾತ್ರೆಗಳು ಬೇಗ ಒಡೆದು ಹೋಗಲು ಕಾರಣವಾಗುತ್ತದೆ. ಹಾಗಾಗಿ ಎರಡು ಪಾತ್ರೆಗಳ ಮಧ್ಯದಲ್ಲಿ ಮೃದುವಾದ ಕಾಗದದ ತುಂಡನ್ನು ಇರಿಸಿ. ಮತ್ತು ತುಂಬಾ ಭಾರವಾದ ಪಾತ್ರೆಗಳನ್ನು ಕೆಳಗಿನಿಂದ ಜೋಡಿಸುತ್ತಾ ಬನ್ನಿ.
ಈ ಪಾತ್ರೆಗಳನ್ನು ತೊಳೆಯುವಾಗ ನೀರು ತುಂಬಾ ಬಿಸಿಯಾಗಿರಬಾರದು. ಇದರಿಂದ ಪಾತ್ರೆಗಳು ಬೇಗ ಬಿರುಕು ಬಿಡುತ್ತದೆ. ಹಾಗೂ ಬೇಗನೆ ಮಸುಕಾಗುತ್ತವೆ ಹಾಗಾಗಿ ಉಗುರು ಬೆಚ್ಚಗಿರುವ ಅಥವಾ ತಣ್ಣಗಿರುವ ನೀರಿನಲ್ಲಿ ತೊಳೆಯಿರಿ.
ಪಾತ್ರೆಗಳನ್ನು ಒರೆಸುವಾಗ ಎಚ್ಚರಿಕೆಯಿಂದಿರಿ. ಪಾತ್ರೆಯ ಕೆಳಗೆ ತೆಳುವಾದ ಬಟ್ಟೆ ಇರಿಸಿ. ಇದರಿಂದ ಪಾತ್ರೆ ಕೈಜಾರಿ ಬಿದ್ದರೂ ಒಡೆಯುವುದಿಲ್ಲ. ಹಾಗೇ ಪಾತ್ರೆಗಳನ್ನು ಜೋಡಿಸುವಾಗ ಕೆಳಗಡೆ ತೆಳುವಾದ ಬಟ್ಟೆಯನ್ನಿಟ್ಟು ಅದರ ಮೇಲೆ ಜೋಡಿಸಿದರೆ ಪಾತ್ರೆ ಒಡೆಯುವುದಿಲ್ಲ.