alex Certify ಬೇಡದ ಕೂದಲು ಸ್ವಚ್ಛಗೊಳಿಸಲು ಈ ಕ್ರಮ ಅನುಸರಿಸಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೇಡದ ಕೂದಲು ಸ್ವಚ್ಛಗೊಳಿಸಲು ಈ ಕ್ರಮ ಅನುಸರಿಸಿ

ಶರೀರವನ್ನು ಸ್ವಚ್ಛವಾಗಿಡಲು ಬೇಡದ ಕೂದಲುಗಳನ್ನು ತೆಗೆದು ಹಾಕುವ ಅವಶ್ಯಕತೆ ಇದೆ. ಬೇಡದ ಕೂದಲನ್ನು ತೆಗೆದು ಹಾಕಲು ಶೇಕಡಾ 10 ರಲ್ಲಿ 8 ರಷ್ಟು ಮಹಿಳೆಯರು ರೇಜರ್ ಬಳಸ್ತಾರೆ. ಖಾಸಗಿ ಭಾಗಗಳನ್ನು ಸ್ವಚ್ಛಗೊಳಿಸಿಕೊಳ್ಳುವಾಗ ಮಾಡುವ ಸಣ್ಣ ನಿರ್ಲಕ್ಷ್ಯ ಆರೋಗ್ಯ ಕೆಡಿಸಬಹುದು.

ಹಾಗಾಗಿ ಬೇಡದ ಕೂದಲನ್ನು ಸ್ವಚ್ಛಗೊಳಿಸುವಾಗ ಕೆಲವೊಂದು ವಿಷಯಗಳ ಬಗ್ಗೆ ಗಮನ ನೀಡುವುದು ಅವಶ್ಯಕ.

ಒಂದೇ ರೇಜರ್ ಬಳಕೆ ಮಾಡಬಾರದು. ಕಾಲುಗಳು ಹಾಗೂ ಖಾಸಗಿ ಭಾಗಗಳಿಗೆ ಒಂದೇ ರೇಜರ್ ಬಳಕೆ ಒಳ್ಳೆಯದಲ್ಲ. ಉತ್ತಮ ಗುಣಮಟ್ಟದ ಹಾಗೂ ವಿಶೇಷವಾಗಿ ಮಹಿಳೆಯರಿಗಾಗಿ ಮಾಡಿರುವ ರೇಜರ್ ಖರೀದಿಸುವುದು ಒಳ್ಳೆಯದು. ಒಂದೇ ರೇಜರನ್ನು ಎಲ್ಲ ಕಡೆ ಬಳಸಿದ್ರೆ ತುರಿಕೆ ಕಾಣಿಸಿಕೊಳ್ಳುವ ಸಾಧ್ಯತೆಗಳಿರುತ್ತವೆ.

ರೇಜರ್ ಬಳಸುವ ಮುನ್ನ ಕತ್ತರಿ ಪ್ರಯೋಗ ಮಾಡಿ. ಉದ್ದದ ಕೂದಲುಗಳನ್ನು ತೆಗೆದ ನಂತ್ರ ರೇಜರ್ ಬಳಸಿದ್ರೆ ಕೆಲಸ ಸುಲಭವಾಗುತ್ತದೆ.

ಶೇವ್ ಮಾಡುವುದರಿಂದ ಚರ್ಮ ಒಣಗಿ ಒರಟಾಗುತ್ತದೆ. ಹಾಗಾಗಿ ಆಲಿವ್ ಆಯಿಲ್, ಕೊಬ್ಬರಿ ಎಣ್ಣೆ ಬಳಕೆ ಉತ್ತಮ. ಶೇವಿಂಗ್ ಕ್ರೀಮ್ ಕೂಡ ಬಳಸಬಹುದು.

ರೇಜರ್ ಬಳಸಿದ್ರೂ ಕೆಲವೊಮ್ಮೆ ಸಣ್ಣ ಸಣ್ಣ ಕೂದಲುಗಳು ಉಳಿದು ಬಿಡುತ್ತವೆ. ಅವು ನಂತ್ರ ಚರ್ಮದ ಸೌಂದರ್ಯವನ್ನು ಕೆಡಿಸುತ್ತವೆ. ಹಾಗಾಗಿ ಸರಿಯಾಗಿ ನೋಡಿ ರೇಜರ್ ಬಳಸಿ. ನಂತ್ರ ನೀರಿನಿಂದ ಚೆನ್ನಾಗಿ ಕ್ಲೀನ್ ಮಾಡಿಕೊಳ್ಳಿ.

ಶೇವ್ ಮಾಡಿದ ನಂತ್ರ ಚರ್ಮದ ಕಾಂತಿ ಹೆಚ್ಚಿಸಿಕೊಳ್ಳಲು ಕ್ರೀಂ ಬಳಸಿ. ಆಲಿವ್ ಆಯಿಲ್ ಅಥವಾ ಟಿ ಟ್ರೀ ಆಯಿಲ್ ಬಳಕೆ ಉತ್ತಮ.

ಒಂದು ಬಾರಿ ಬಳಸಿದ ನಂತ್ರ ರೇಜರನ್ನು ಬಿಸಿ ನೀರಿನಲ್ಲಿ ತೊಳೆದು ಸ್ವಚ್ಛಗೊಳಿಸಿ. ರೇಜರ್ ಹಳೆಯದಾಗಿದ್ದರೆ ಅದನ್ನು ಬಳಸಬೇಡಿ. ರೇಜರನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಆರೋಗ್ಯಕ್ಕೆ ಒಳ್ಳೆಯದು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...