ಕೆಲವೊಮ್ಮೆ ಸಂಬಂಧಗಳು ಸ್ವಾದ ಕಳೆದುಕೊಳ್ಳುತ್ತವೆ. ಸಣ್ಣ ಸಣ್ಣ ವಿಷ್ಯಗಳು ದೊಡ್ಡ ಗಲಾಟೆಗೆ ಕಾರಣವಾಗುತ್ತವೆ. ದೀರ್ಘಕಾಲದ ಸಂಬಂಧವನ್ನು ಗಟ್ಟಿಯಾಗಿರಿಸಿಕೊಳ್ಳುವುದು ಬಹಳ ಮುಖ್ಯ. ಸಂಬಂಧ ಸದಾ ಹೊಸತರಂತಿರಬೇಕೆಂದ್ರೆ ಕೆಲವೊಂದು ಟಿಪ್ಸ್ ಅನುಸರಿಸಬೇಕಾಗುತ್ತದೆ.
ಮೊದಲು ನಿಮ್ಮನ್ನು ನೀವು ಖುಷಿಯಾಗಿಟ್ಟುಕೊಳ್ಳಿ. ಯಾವುದೇ ವ್ಯಕ್ತಿಯನ್ನು ಖುಷಿ ಪಡಿಸುವ ಮುನ್ನ ನೀವು ಖುಷಿಯಾಗಿರುವುದು ಮುಖ್ಯವಾಗಿರುತ್ತದೆ. ನೀವು ಖುಷಿಯಾಗಿದ್ದರೆ ಬೇರೆಯವರನ್ನು ಸುಲಭವಾಗಿ ಸಂತೋಷಗೊಳಿಸಬಹುದು. ಯಾವುದೇ ಕಷ್ಟ ನಿಮಗೆ ದೊಡ್ಡದೆನಿಸುವುದಿಲ್ಲ.
ಗಂಡ ಹೆಂಡತಿ ಮಧ್ಯೆ ಒಂದೇ ಅಲ್ಲ ಎಲ್ಲ ಸಂಬಂಧದಲ್ಲೂ ಭಾವನೆಗಳನ್ನು ಹಂಚಿಕೊಳ್ಳುವುದು ಬಹಳ ಮುಖ್ಯವಾಗುತ್ತದೆ. ನಿಮ್ಮ ಭಾವನೆಗಳನ್ನು, ಸಮಸ್ಯೆಗಳನ್ನು ಸಂಗಾತಿ ಮುಂದೆ ಹೇಳಿಕೊಂಡಾಗ ಪರಿಹಾರ ಸಿಗಲು ಸಾಧ್ಯ. ಜೊತೆಗೆ ವಿಶ್ವಾಸ, ಪ್ರೀತಿ ಹೆಚ್ಚಾಗುತ್ತದೆ.
ಸಂಬಂಧದಲ್ಲಿ ಪ್ರಾಮಾಣಿಕತೆ ಅತ್ಯಗತ್ಯ. ಇದು ಸಂಬಂಧವನ್ನು ಗಟ್ಟಿಗೊಳಿಸಿ, ಪ್ರೀತಿ ಹೆಚ್ಚಿಸುತ್ತದೆ. ಸಂಗಾತಿಯಿಂದ ಯಾವುದನ್ನೂ ಮುಚ್ಚಿಡಬೇಡಿ.
ನಿಮ್ಮ ಸಂಗಾತಿ ಜೊತೆ ನಿಮಗೆ ಎಷ್ಟೇ ಮಧುರ ಸಂಬಂಧವಿರಲಿ ಸಂಗಾತಿಗೆ ಸಣ್ಣದೊಂದು ಸ್ಪೇಸ್ ನೀಡಲು ಮರೆಯದಿರಿ. ಸಂಗಾತಿಯ ಪ್ರತಿ ಕೆಲಸದಲ್ಲಿ ಮಧ್ಯ ಪ್ರವೇಶ, ಹಸ್ತಕ್ಷೇಪ ಮಾಡಿದ್ರೆ ಸಂಗಾತಿಗೆ ಕಿರಿಕಿರಿಯಾಗುತ್ತದೆ. ಅವ್ರಿಗೆ ಒಂದಿಷ್ಟು ಸಮಯ, ನಿರ್ಧಾರಗಳನ್ನು ತೆಗೆದುಕೊಳ್ಳಲು ಅವಕಾಶ ನೀಡಬೇಕಾಗುತ್ತದೆ.
ಕ್ಷಮೆ ಅತಿ ದೊಡ್ಡದು. ತಪ್ಪನ್ನು ಪ್ರತಿಯೊಬ್ಬರೂ ಮಾಡ್ತಾರೆ. ಅದಕ್ಕೆ ಕಾರಣವೇನು? ಯಾವ ಸಂದರ್ಭದಲ್ಲಿ ತಪ್ಪಾಗಿದೆ ಎಂಬುದನ್ನು ತಿಳಿದು ಪರಸ್ಪರ ಕ್ಷಮೆ ನೀಡುವ ಗುಣ ಬೆಳೆಸಿಕೊಳ್ಳಿ.