ಮೈಸೂರು: ಭ್ರೂಣಹತ್ಯೆ ಪ್ರಕರಣ ಸಂಬಂಧ ಮೈಸೂರು ಆರೋಗ್ಯಾಧಿಕಾರಿ ನೇತೃತ್ವದಲ್ಲಿ ಕಾರ್ಯಾಚರಣೆ ಚುರುಕುಗೊಂಡಿದ್ದು, ಟಾಸ್ಕ್ ಫೋರ್ಸ್ ರಚಿಸಿ ಜಿಲ್ಲೆಯಾದ್ಯಂತ ಆಸ್ಪತ್ರೆಗಳಲ್ಲಿ ಪರಿಶೀಲನೆ ನಡೆಸಲಾಗುತ್ತಿದೆ.
ಮೈಸೂರಿನ ನರ್ಸಿಂಗ್ ಹೋಂ, ಸ್ಕ್ಯಾನಿಂಗ್ ಸೆಂಟರ್ ಗಳಿಗೆ ಭೇಟಿ ನೀಡಿರುವ ಟಾಸ್ಕ್ ಫೋರ್ಸ್ ತಂಡ ಪರಿಶೀಲನೆ ನಡೆಸಿವೆ. ವೈದ್ಯಕೀಯ ಪ್ರಮಾಣಪತ್ರಗಳಿಲ್ಲದ 14 ಕ್ಲಿನಿಕ್ ಗಳಿಗೆ ಅಧಿಕಾರಿಗಳು ಬೀಗ ಜಡಿದಿದ್ದಾರೆ.
ಸೂಕ್ತ ದಾಖಲೆಗಳನ್ನು ನೀಡದ ಕ್ಲಿನಿಕ್, ಆಸ್ಪತ್ರೆಗಳಿಗೆ ನೋಟೀಸ್ ನೀಡಲಾಗುತ್ತಿದೆ. ಹೆಣ್ಣುಭ್ರೂಣ ಹತ್ಯೆ ಪ್ರಕರಣ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಅಧಿಕಾರಿಗಳು ಆಸ್ಪತ್ರೆಗಳಿಗೆ ಭೇಟಿ ನೀದಿ ಪರಿಶೀಲನೆ ನಡೆಸಿದ್ದಾರೆ.