alex Certify 48 ಗಂಟೆಗಳಲ್ಲಿ ಸಾವಿಗೆ ಕಾರಣವಾಗುತ್ತೆ ಮಾಂಸ ಭಕ್ಷಕ ಬ್ಯಾಕ್ಟೀರಿಯಾ; ಜಪಾನ್‌ನಲ್ಲಿ ಭೀತಿ ಸೃಷ್ಟಿಸಿದೆ ಈ ಹೊಸ ಕಾಯಿಲೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

48 ಗಂಟೆಗಳಲ್ಲಿ ಸಾವಿಗೆ ಕಾರಣವಾಗುತ್ತೆ ಮಾಂಸ ಭಕ್ಷಕ ಬ್ಯಾಕ್ಟೀರಿಯಾ; ಜಪಾನ್‌ನಲ್ಲಿ ಭೀತಿ ಸೃಷ್ಟಿಸಿದೆ ಈ ಹೊಸ ಕಾಯಿಲೆ…!

ಜಪಾನ್‌ನಲ್ಲಿ ಮಾಂಸ ತಿನ್ನುವ ಬ್ಯಾಕ್ಟೀರಿಯಾ ವೇಗವಾಗಿ ಹರಡುತ್ತಿದ್ದು, ಆತಂಕಕ್ಕೆ ಕಾರಣವಾಗಿದೆ. ಈ ಬ್ಯಾಕ್ಟೀರಿಯಾವು ಸ್ಟ್ರೆಪ್ಟೋಕೊಕಲ್ ಟಾಕ್ಸಿಕ್ ಶಾಕ್ ಸಿಂಡ್ರೋಮ್ (STSS) ಗೆ ಕಾರಣವಾಗುತ್ತದೆ. ಇದರಿಂದಾಗಿ ರೋಗಿ 48 ಗಂಟೆಗಳೊಳಗಾಗಿ ಸಾಯಬಹುದು.

ಈ ವರ್ಷ ಜಪಾನ್‌ನಲ್ಲಿ 977 STSS ಪ್ರಕರಣಗಳು ವರದಿಯಾಗಿವೆ. ಕಳೆದ ವರ್ಷ 941 ಜನರಲ್ಲಿ ಈ ಸೋಂಕು ಪತ್ತೆಯಾಗಿತ್ತು. ಜಪಾನ್‌ನ ವೈದ್ಯಕೀಯ ಸಂಸ್ಥೆಯ ಅಂದಾಜಿನ ಪ್ರಕಾರ ರೋಗಿಗಳ ಸಂಖ್ಯೆ ಶರವೇಗದಲ್ಲಿ ಹೆಚ್ಚಾಗುತ್ತಿದ್ದು, 2024ರ ಅಂತ್ಯದ ವೇಳೆಗೆ 2500 STSS ಪ್ರಕರಣಗಳು ವರದಿಯಾಗಬಹುದು. ಅಷ್ಟೇ ಅಲ್ಲ ಈ ರೋಗಕ್ಕೆ ತುತ್ತಾದವರ ಸಾವಿನ ಪ್ರಮಾಣವು 30 ಪ್ರತಿಶತಕ್ಕೆ ತಲುಪುವ ಅಪಾಯವಿದೆ.

ಕೋವಿಡ್ ನಿರ್ಬಂಧಗಳಲ್ಲಿ ಸಡಿಲಿಕೆ ಬಳಿಕ ರೋಗಿಗಳ ಸಂಖ್ಯೆ ಹೆಚ್ಚಳ ?

COVID-19 ಸಾಂಕ್ರಾಮಿಕದ ಸಮಯದಲ್ಲಿ ವಿಧಿಸಲಾದ ನಿರ್ಬಂಧಗಳನ್ನು ಸಡಿಲಿಸಿದ ನಂತರ ಜಪಾನ್‌ನಲ್ಲಿ STSS ಪ್ರಕರಣಗಳು ಹೆಚ್ಚುತ್ತಿವೆ ಎಂದು ಹೇಳಲಾಗ್ತಿದೆ. ಆದರೆ ಈ ಬಗ್ಗೆ ಖಚಿತವಾದ ಪುರಾವೆಗಳಿಲ್ಲ.

ಮಾಂಸ ಭಕ್ಷಕ ಬ್ಯಾಕ್ಟೀರಿಯಾ ದಾಳಿಯ ರೋಗಲಕ್ಷಣಗಳು

STSSನ ಆರಂಭಿಕ ಲಕ್ಷಣಗಳೆಂದರೆ ಜ್ವರ, ಸ್ನಾಯು ನೋವು ಮತ್ತು ಗಂಟಲು ನೋವು. ಆದರೆ ಇದರ ನಂತರ ರೋಗಲಕ್ಷಣಗಳು ವೇಗವಾಗಿ ಗಂಭೀರ ಸ್ಥಿತಿಗೆ ತಲುಪಬಹುದು. ಹೆಚ್ಚಿನ ಜನರಿಗೆ ವಿಪರೀತ ಜ್ವರ, ರಕ್ತದೊತ್ತಡದ ಕುಸಿತ, ಚರ್ಮದಲ್ಲಿ ಕೆಂಪು ದದ್ದುಗಳಾಗುತ್ತವೆ. ಜೊತೆಗೆ ಅಂಗಾಂಶಗಳು ಸತ್ತು ಹೋಗುತ್ತವೆ.

ಈ ಬ್ಯಾಕ್ಟೀರಿಯಾ ದಾಳಿಯಿಂದ ತಪ್ಪಿಸಿಕೊಳ್ಳುವುದು ಕಠಿಣ. ಇದನ್ನು ತಡೆಗಟ್ಟಲು ಕೈಗಳನ್ನು ನಿಯಮಿತವಾಗಿ ತೊಳೆಯಬೇಕು. ಗಾಯಗಳಾಗಿದ್ದಲ್ಲಿ ಅವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಇದಲ್ಲದೆ  ಸೋಂಕಿನ ಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...