
ಅಂಗಡಿಯಲ್ಲಿನ ಸಿಸಿಟಿವಿ ದೃಶ್ಯಾವಳಿಗಳಲ್ಲಿ ಮಹಿಳೆಯರು ತಮ್ಮ ಸೀರೆಯೊಳಗೆ ಬಟ್ಟೆಗಳನ್ನು ಬಚ್ಚಿಟ್ಟುಕೊಂಡು ಕದಿಯುವ ದೃಶ್ಯ ಸೆರೆಯಾಗಿದೆ.
ವೀಡಿಯೊದಲ್ಲಿ ಐವರು ಮಹಿಳೆಯರು ಎಂದಿನಂತೆ ಅಂಗಡಿಗೆ ಪ್ರವೇಶಿಸಿ ಬಟ್ಟೆಗಳನ್ನು ಹುಡುಕುವುದನ್ನು ಕಾಣಬಹುದು. ಮಹಿಳೆಯೊಬ್ಬರು ಅಂಗಡಿಯಲ್ಲಿನ ಮಾರಾಟಗಾರರನ್ನು ತನಗೆ ಹೆಚ್ಚಿನ ಬಟ್ಟೆಗಳನ್ನು ತೋರಿಸುವಂತೆ ಕೇಳುತ್ತಾರೆ. ಇಬ್ಬರು ಮಹಿಳೆಯರು ತಮ್ಮ ಸೀರೆಯೊಳಗೆ ಬಟ್ಟೆಯ ಬಾಕ್ಸ್ ಗಳನ್ನು ಬಚ್ಚಿಟ್ಟುಕೊಳ್ಳುತ್ತಾರೆ.
ಈ ವೇಳೆ ಉಳಿದ ಮಹಿಳೆಯರು ಯಾರಿಗೂ ಕಾಣದಂತೆ ಮಹಿಳೆಯನ್ನು ಮರೆಮಾಚುವಂತೆ ನಿಲ್ಲುತ್ತಾರೆ. ಸ್ವಲ್ಪ ಸಮಯದ ನಂತರ, ಐವರೂ ಒಟ್ಟಿಗೆ ಅಂಗಡಿಯಿಂದ ಹೊರಬರುತ್ತಾರೆ. ಬಳಿಕ ಬಟ್ಟೆ ಸಂಖ್ಯೆ ಕಡಿಮೆಯಾಗಿದ್ದನ್ನ ಗಮನಿಸಿದ ಅಂಗಡಿಯವರು ಪೊಲೀಸರಿಗೆ ದೂರು ನೀಡಿದ್ದಾರೆ.
ಪೊಲೀಸರು ಅಂಗಡಿಯ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುವ ಮೂಲಕ ಮಹಿಳೆಯನ್ನು ಗುರುತಿಸಲು ಪ್ರಯತ್ನಿಸುತ್ತಿದ್ದಾರೆ ಮತ್ತು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.