ಅನೇಕ ಹುಡುಗಿಯರು ತಯಾರಾಗಲು ಬಹಳ ಸಮಯ ತೆಗೆದುಕೊಳ್ಳುತ್ತಾರೆ. ಇದು ಬಹುತೇಕ ಹುಡುಗರ ವಾದ. ಇದು ನಿಜವೂ ಹೌದು.
ಹುಡುಗರಿಗಿಂತ ಹುಡುಗಿಯರ ಬಳಿ ಬಟ್ಟೆ ಕಲೆಕ್ಷನ್ ಹೆಚ್ಚಿರುತ್ತದೆ. ಜೀನ್ಸ್ ಪ್ಯಾಂಟ್ ನಿಂದ ಸೀರೆವರೆಗೆ, ಕುರ್ತಿ, ಲೆಹೆಂಗ, ಸ್ಕರ್ಟ್ ಹೀಗೆ ಹೇಳ್ತಾ ಹೋದ್ರೆ ದೊಡ್ಡ ಲಿಸ್ಟೇ ಆಗುತ್ತೆ. ಇದರಲ್ಲಿ ವೆರಾಯಿಟಿ ಕಲೆಕ್ಷನ್ಸ್ ಕೂಡ ಇರೋದ್ರಿಂದ ರೆಡಿಯಾಗುವಾಗ ಬೇಕಾಗುವ ಬಟ್ಟೆ ಸಿಗದೆ ಹೋಗಬಹುದು.
ಇದು ಹುಡುಗಿಯರು ಲೇಟ್ ಎನ್ನಲು ಮುಖ್ಯ ಕಾರಣವಾಗುತ್ತೆ.
ನಮ್ಮದೂ ಇದೇ ಸಮಸ್ಯೆ ಎನ್ನುವ ಹುಡುಗಿಯರು ವಾರ್ಡ್ರೋಬ್ ಗಳಲ್ಲಿ ಈ 8 ಬಟ್ಟೆಯನ್ನು ಅವಶ್ಯಕವಾಗಿಟ್ಟುಕೊಳ್ಳಿ. ಅವು ನಿಮ್ಮ ಕಪಾಟಿನಲ್ಲಿದ್ರೆ ರೆಡಿಯಾಗಲು 5 ನಿಮಿಷ ಸಾಕಾಗುತ್ತದೆ.
ಬಿಳಿ ಅಂಗಿಯನ್ನು ಕಪಾಟಿನಲ್ಲಿಡಿ. ಇದು ವಿವಿಧ ಬಾಟಮ್ ವೇರ್ ಗಳೊಂದಿಗೆ ಸುಲಭವಾಗಿ ಹೊಂದಿಕೊಳ್ಳುತ್ತದೆ. ಜೀನ್ಸ್, ಪಲಾಜೊ, ಪ್ಯಾಂಟ್, ಲೆಗ್ಗಿಂಗ್ ಅಥವಾ ಸ್ಕರ್ಟ್ ಯಾವುದರ ಮೇಲೆ ಕೂಡ ಇದನ್ನು ಧರಿಸಬಹುದು.
ಇನ್ನೊಂದೆಂದ್ರೆ ವಾರ್ಡ್ರೋಬ್ ನಲ್ಲಿ ಕಪ್ಪು ಮತ್ತು ಬಿಳಿ ಲೆಗ್ಗಿಂಗ್ ಇಡಿ. ಇದನ್ನು ಯಾವುದೇ ಕುರ್ತಿ ಜೊತೆ ಧರಿಸಬಹುದು.
ಡೆನಿಮ್ ಜೀನ್ಸ್, ನಿತ್ಯ ಬಳಕೆ ಮಾಡುವ ಉಡುಪಾಗಿದೆ. ನೀಲಿ ಜೀನ್ಸ್ ಮತ್ತು ಒಂದು ಕಪ್ಪು ಜೀನ್ಸ್ ಇಟ್ಟುಕೊಳ್ಳಿ. ಕಾಲೇಜು, ಕಚೇರಿ, ಶಾಪಿಂಗ್ ಹೀಗೆ ಯಾವ ಸಂದರ್ಭದಲ್ಲಿ ಕೂಡ ಇದನ್ನು ಬಳಸಬಹುದು. ಫಿಟ್ಟಿಂಗ್ ಮತ್ತು ಉತ್ತಮ ಫ್ಯಾಬ್ರಿಕ್ ಆಗಿರಬೇಕು ಎಂಬುದನ್ನು ನೆನಪಿನಲ್ಲಿಟ್ರೆ ಸಾಕು.
ಮ್ಯಾಕ್ಸಿ ಉಡುಗೆ, ಪ್ರತಿಯೊಂದು ಹುಡುಗಿಯರ ಅತ್ಯುತ್ತಮ ಆಯ್ಕೆಯಾಗಿದೆ. ವಾರ್ಡ್ರೋಬ್ ನಲ್ಲಿ ಸ್ಟೈಲ್ ಸ್ಟೇಟ್ಮೆಂಟ್ ಆಗಿ ಮ್ಯಾಕ್ಸಿ ಡ್ರೆಸ್ ಇಟ್ಟುಕೊಳ್ಳಬೇಕು.
ನೇರ ಕಟ್ ಇರುವ ಕುರ್ತಿಯನ್ನು, ಡೆನಿಮ್ ಗಳು, ಚುಡಿದಾರ್, ಲೆಗ್ಗಿಂಗ್ ಗಳು ಮತ್ತು ಪಲಾಜೊ ಪ್ಯಾಂಟ್ಗಳೊಂದಿಗೆ ಧರಿಸಬಹುದು. ಹಾಗಾಗಿ ಇದೂ ನಿಮ್ಮ ಕಪಾಟಿನಲ್ಲಿರಲಿ.
ಕಪಾಟಿನಲ್ಲಿ ಸೀರೆ ಇಟ್ಟುಕೊಳ್ಳುವುದು ಬಹಳ ಮುಖ್ಯ. ಸಾಕಷ್ಟು ವೆರೈಟಿ ಸೀರೆಗಳು ಮಾರುಕಟ್ಟೆಗೆ ಬಂದಿವೆ. ನಿಮಗಿಷ್ಟವಾಗುವ, ಎಲ್ಲ ಸಂದರ್ಭಗಳಿಗೆ ಹೊಂದುವ ಸೀರೆ ಖರೀದಿಸಿಟ್ಟುಕೊಳ್ಳಿ. ಅದಕ್ಕೆ ಬೇಕಾದ ಬ್ಲೌಸ್, ಪೆಟಿಕೋಟ್ ಎಲ್ಲವನ್ನೂ ಒಂದೇ ಕಡೆ ಇಡಲು ಮರೆಯಬೇಡಿ.
ಇತ್ತೀಚಿನ ದಿನಗಳಲ್ಲಿ ಶ್ರಗ್ ಬಹಳ ಜನಪ್ರಿಯವಾಗುತ್ತಿದೆ. ಜಾಕೆಟ್ ಶೈಲಿ, ಕೇಪ್ ಶೈಲಿ ಹೀಗೆ ಬಗೆ ಬಗೆ ಶ್ರಗ್ ಇದ್ದು, ಅದ್ರಲ್ಲಿ ಒಂದೆರಡು ವೆರೈಟಿ ನಿಮ್ಮ ಬಳಿ ಇರಲಿ.
ಡೆನಿಮ್ ಜಾಕೆಟ್ ಪ್ರತಿ ಹುಡುಗಿಯ ವಾರ್ಡ್ರೋಬ್ನಲ್ಲಿ ಕಡ್ಡಾಯವಾಗಿ ಇರಬೇಕು. ಇದನ್ನು ಸಾಮಾನ್ಯ ಟೀ ಶರ್ಟ್, ಸಾದಾ ಟಾಪ್, ಮ್ಯಾಕ್ಸಿ ಡ್ರೆಸ್ ಮತ್ತು ಶಾರ್ಟ್ ಡ್ರೆಸ್ ಜೊತೆ ಧರಿಸಬಹುದು.