ರನ್ನಿಂಗ್ ಬಹಳ ಪ್ರಯೋಜನಕಾರಿ. ಇದು ನಮ್ಮ ದೇಹವನ್ನು ಆರೋಗ್ಯವಾಗಿಡುವ ಜೊತೆಗೆ ತೂಕವನ್ನು ನಿಯಂತ್ರಿಸಿಕೊಳ್ಳಲು ಸಹಕಾರಿ. ಮೂಳೆಗಳನ್ನು ಬಲಗೊಳಿಸುವ ಕೆಲಸ ಕೂಡ ಮಾಡುತ್ತದೆ. ಅನೇಕ ಜನರು ಪ್ರತಿ ದಿನ ಬೆಳಿಗ್ಗೆ ಓಡುವ ಅಭ್ಯಾಸ ಹೊಂದಿರುತ್ತಾರೆ. ಈಗಿನ ದಿನಗಳಲ್ಲಿ ಮನೆಯಿಂದ ಹೊರಗೆ ಓಡುವ ಜನರಿಗಿಂತ ಟ್ರೆಡ್‌ಮಿಲ್‌ನಲ್ಲಿ ಓಡುವವರೇ ಹೆಚ್ಚು.
ನೀವು ಮನೆಯಿಂದ ಹೊರಗೆ ಮೈದಾನದಲ್ಲಿ ಅಥವಾ ಪಾರ್ಕ್ ನಲ್ಲಿ ಓಡಿದ್ರೆ ಅದ್ರಿಂದ ಕೆಲ ಪ್ರಯೋಜನವಿದೆ. ಅದೇ ರೀತಿ ಟ್ರೆಡ್‌ಮಿಲ್‌ನಲ್ಲಿ ಓಡಿದ್ರೂ ಪ್ರಯೋಜನವಿದೆ. ತೆರೆದ ಮೈದಾನದಲ್ಲಿ ನೀವು ಎಲ್ಲಿ ಬೇಕಾದ್ರೂ ಓಡಬಹುದು. ಒಂದೇ ಕೋಣೆಯಲ್ಲಿ ಓಡಬೇಕಾದ ಅನಿವಾರ್ಯತೆ ಇಲ್ಲ. ಬೇರೆ ಬೇರೆ ದಿಕ್ಕಿನಲ್ಲಿ ನೀವು ಓಡುವ ಕಾರಣ ನಿಮ್ಮ ಓಟದ ವೇಗ ಹೆಚ್ಚಾಗುತ್ತದೆ. ಹುಲ್ಲು ಹಾಸಿಗೆ, ಕಾಂಕ್ರಿಟ್ ಮೇಲೆ ನೀವು ರನ್ನಿಂಗ್ ಮಾಡುವ ಕಾರಣ ನಿಮ್ಮ ಮೂಳೆಗಳು ಬಲಗೊಳ್ಳುತ್ತವೆ.
ಅದೇ ನೀವು ಟ್ರೆಡ್‌ಮಿಲ್ ನಲ್ಲಿ ಓಡಿದ್ರೆ ಈ ಯಾವ ಪ್ರಯೋಜನ ಸಿಗೋದಿಲ್ಲ. ಆದ್ರೆ ಸಮಯದ ಅಭಾವ ಮತ್ತು ಕೆಟ್ಟ ಹವಾಮಾನದ ಸಂದರ್ಭದಲ್ಲಿ ನೀವು ಟ್ರೆಡ್‌ಮಿಲ್‌ಬಳಕೆ ಮಾಡಬಹುದು. ಇದು ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ.
ಇವೆರಡರಲ್ಲಿ ಯಾವುದು ಬೆಸ್ಟ್ ಎನ್ನುವ ಪ್ರಶ್ನೆಗೆ ಉತ್ತರ ತೆರೆದ ಜಾಗದಲ್ಲಿ ಓಡೋದು ಎನ್ನುತ್ತಾರೆ ತಜ್ಞರು. ಅದಕ್ಕೆ ಕಾರಣವಿದೆ. ಮ್ಯಾರಾಥಾನ್ ಅಥವಾ ಓಟದ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವವರಿಗೆ ಇದು ಪ್ರಯೋಜನಕಾರಿ. ಜೊತೆಗೆ ವಿಟಮಿನ್ ಡಿ ನಿಮ್ಮ ದೇಹ ಸೇರುತ್ತದೆ. ಓಟ ಯಾವುದೇ ಆಗಿರಲಿ, ಪ್ರತಿ ದಿನ ಓಡುವ ಅಭ್ಯಾಸ ಬಿಡಬೇಡಿ ಎನ್ನುತ್ತಾರೆ ತಜ್ಞರು.