ಜನಪ್ರಿಯ ಫಿಟ್ನೆಸ್ ಪ್ರಭಾವಿ ಮಿಶಾ ಶರ್ಮಾ ಅವರು ಸೀರೆ ತೊಟ್ಟು ಡಬಲ್ ಫ್ಲಿಪ್ ಮಾಡಿರುವ ವಿಡಿಯೋವನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ಭಾರಿ ವೈರಲ್ ಆಗಿದೆ.
ಇತ್ತೀಚಿಗೆ ಶರ್ಮಾ ಹಲವಾರು ಬೆರಗುಗೊಳಿಸುವ ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಆಕೆಯ ಸಾಹಸಕ್ಕೆ ನೆಟ್ಟಿಗರು ಸಹ ಫಿದಾ ಆಗಿದ್ದಾರೆ. ಆಕೆಯ ಜಿಮ್ನಾಸ್ಟಿಕ್ಸ್ ಚಲನೆಗಳಂತಹ ಸಾಹಸವು ನೆಟ್ಟಿಗರನ್ನು ಬೆರಗುಗೊಳಿಸಿದೆ. ಅಂದಹಾಗೆ, ಮಿಶಾ ಶರ್ಮಾ ಇನ್‌ಸ್ಟಾಗ್ರಾಮ್‌ನಲ್ಲಿ 7.8 ಲಕ್ಷಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿದ್ದಾರೆ. ಈ ತಿಂಗಳ ಆರಂಭದಲ್ಲಿ, ಬೆಂಗಳೂರು ಮೆಟ್ರೋದಲ್ಲಿ ಪೂರ್ಣ 360 ಡಿಗ್ರಿ ಫ್ಲಿಪ್ ಮಾಡುವುದನ್ನು ತೋರಿಸುವ ಅವರ ವಿಡಿಯೋವೊಂದು ವೈರಲ್ ಆಗಿತ್ತು.
ಪಾರುಲ್ ಅರೋರಾ ಎಂಬುವವರು ಕೂಡ ತನ್ನ ಜಿಮ್ನಾಸ್ಟಿಕ್ಸ್ ಕೌಶಲ್ಯದಿಂದ ಪ್ರಭಾವಿ ಸಾಮಾಜಿಕ ಮಾಧ್ಯಮದ ಅನುಯಾಯಿಗಳನ್ನು ನಿರ್ಮಿಸಿಕೊಂಡಿದ್ದಾರೆ. ಅರೋರಾ ಅವರ ಹಲವಾರು ವಿಡಿಯೋಗಳಲ್ಲಿ ಅವರು ಕಾರ್ಟ್‌ವೀಲ್‌ಗಳು, ಬ್ಯಾಕ್‌ಫ್ಲಿಪ್‌ಗಳು ಮತ್ತು ಹೆಚ್ಚಿನದನ್ನು ಸೀರೆ ಧರಿಸಿಯೇ ಸಲೀಸಾಗಿ ಮಾಡುತ್ತಾರೆ. ಇದರಿಂದ ಹಲವಾರು ಅನುಯಾಯಿಗಳನ್ನು ಅವರು ಗಳಿಸಿದ್ದಾರೆ.
ಇನ್ನು ಇಂತಹ ಸಾಹಸಗಳನ್ನು ಮಾಡುವಾಗ ಬಹಳ ಎಚ್ಚರಿಕೆಯಿಂದಿರಬೇಕು ಎಂದು ಅವರು ಹೇಳುತ್ತಾರೆ. ಕೆಲವು ಹಂತದ ತರಬೇತಿಯನ್ನು ಸಾಧಿಸಿದ ನಂತರವೇ ಅಂತಹ ಸಾಹಸಗಳನ್ನು ಪ್ರಯತ್ನಿಸಬೇಕು. ತಜ್ಞರ ಮಾರ್ಗದರ್ಶನದಲ್ಲಿ ಇದನ್ನು ಮಾಡಬೇಕು ಎಂದು ಅವರು ಹೇಳುತ್ತಾರೆ.