alex Certify 7.5 ಕೋಟಿ ರೂ. ಗಳ ಸಾಮ್ರಾಜ್ಯ ಕಟ್ಟಿದ ಶ್ರೀಮಂತ ಭಿಕ್ಷುಕನ ಕತೆ ಕೇಳಿದ್ರೆ ಶಾಕ್‌ ಆಗ್ತೀರಾ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

7.5 ಕೋಟಿ ರೂ. ಗಳ ಸಾಮ್ರಾಜ್ಯ ಕಟ್ಟಿದ ಶ್ರೀಮಂತ ಭಿಕ್ಷುಕನ ಕತೆ ಕೇಳಿದ್ರೆ ಶಾಕ್‌ ಆಗ್ತೀರಾ….!

ಭಾರತದ ಅತಿ ಶ್ರೀಮಂತ ಭಿಕ್ಷಕುರಾಗಿರುವ ಭರತ್‌ ಅವರ ಕಥೆಯಿದು. ಯಾವುದೇ ವಿರಾಮವಿಲ್ಲದೆ 10-12 ಗಂಟೆಗಳ ಕಾಲ ಕೆಲಸ ಮಾಡುವ ಭರತ್ ಅವರ ಮಾಸಿಕ ಆದಾಯ 60,000 ರಿಂದ 70,000 ರೂ. ಇಂದು ಅವರು ಮುಂಬೈನಲ್ಲಿ 1.4 ಕೋಟಿ ಮೌಲ್ಯದ ಎರಡು ಫ್ಲಾಟ್‌ಗಳನ್ನು ಹೊಂದಿದ್ದಾರೆ ಮತ್ತು ಅವರ ಪತ್ನಿ, ಇಬ್ಬರು ಪುತ್ರರು, ತಂದೆ ಮತ್ತು ಸಹೋದರನೊಂದಿಗೆ ಇಲ್ಲಿ ವಾಸಿಸುತ್ತಿದ್ದಾರೆ.

ಶಿಕ್ಷಣವನ್ನು ಮುಂದುವರಿಸಲು ಅವಕಾಶವಾಗದೆ ಆರ್ಥಿಕ ಸಂಕಷ್ಟದಿಂದ ತುಂಬಿದ ಬಾಲ್ಯದ ನಂತರ ಸುಮಾರು 40 ವರ್ಷಗಳಿಂದ ಭಿಕ್ಷಾಟನೆಯನ್ನು ಆಶ್ರಯಿಸಿದ್ದ ಭರತ್ ಜೈನ್ ಈಗ 7.5 ಕೋಟಿ ರೂ.ಗಳ ಆಸ್ತಿಯನ್ನು ಹೊಂದಿದ್ದು, ಅವರನ್ನು ಶ್ರೀಮಂತ ಭಿಕ್ಷುಕರನ್ನಾಗಿ ಮಾಡಿದೆ.

ಮಹಾರಾಷ್ಟ್ರದ ಮುಂಬೈನಲ್ಲಿ ವಾಸಿಸುತ್ತಿರುವ 54 ವರ್ಷದ ಭರತ್, ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ (CSMT) ಮತ್ತು ಆಜಾದ್ ಮೈದಾನದಲ್ಲಿ ಭಿಕ್ಷೆ ಬೇಡುವುದನ್ನು ಕಾಣಬಹುದು.

ʼಎಕನಾಮಿಕ್ ಟೈಮ್ಸ್‌ʼ ವರದಿಯ ಪ್ರಕಾರ , ಭರತ್‌ ಅವರ ಒಂದು ದಿನದ ಸರಾಸರಿ ಗಳಿಕೆಯು ಅವರು ಬೇಡುವ ಪ್ರದೇಶ ಮತ್ತು ಹಾದುಹೋಗುವ ಜನರ ದಯೆಯನ್ನ ಅವಲಂಬಿಸಿ ಸುಮಾರು 2,000 ರಿಂದ 4,000 ರೂಪಾಯಿಗಳಾಗಿದೆ.

ಇದರಿಂದಾಗಿ ಯಾವುದೇ ವಿರಾಮವಿಲ್ಲದೆ 10-12 ಗಂಟೆಗಳ ಕಾಲ ಕೆಲಸ ಮಾಡುವ ಭರತ್ ಅವರ ಮಾಸಿಕ ಆದಾಯ 60,000 ರಿಂದ 70,000 ರೂಪಾಯಿಗಳಾಗಿದ್ದು, ಅವರು ಮುಂಬೈನಲ್ಲಿ 1.4 ಕೋಟಿ ಮೌಲ್ಯದ ಎರಡು ಫ್ಲಾಟ್‌ಗಳು ಜೊತೆಗೆ ಥಾಣೆಯಲ್ಲಿ ಎರಡು ಅಂಗಡಿಗಳನ್ನು ಹೊಂದಿದ್ದಾರೆ, ಇದು ಅವರಿಗೆ ಪ್ರತಿ ತಿಂಗಳು ಸುಮಾರು 30,000 ರೂಪಾಯಿಗಳ ಬಾಡಿಗೆ ನೀಡುತ್ತದೆ.

ಭರತ್ ತಮ್ಮ ಇಬ್ಬರು ಪುತ್ರರನ್ನು ಪ್ರತಿಷ್ಠಿತ ಕಾನ್ವೆಂಟ್ ಶಾಲೆಗೆ ಕಳುಹಿಸುವ ಮೂಲಕ ತಮಗೆ ಸಾಧ್ಯವಾಗದ ಗುಣಮಟ್ಟದ ಶಿಕ್ಷಣವನ್ನು ಪಡೆಯುವಂತೆ ನೋಡಿಕೊಂಡಿದ್ದಾರೆ.

ಭಾರತದಲ್ಲಿ ಭಿಕ್ಷಾಟನೆಯನ್ನು ನಿಷೇಧಿಸಲಾಗಿದ್ದರೂ, ಭಿಕ್ಷಾಟನೆಯನ್ನು ತಡೆಯಲು ಸರ್ಕಾರವು ಹಲವಾರು ಕ್ರಮಗಳನ್ನು-ದಂಡ, ಬಂಧನ, ಸರ್ಕಾರದ ಯೋಜನೆಗಳನ್ನು ಜಾರಿಗೊಳಿಸಿದ್ದರೂ ಸಹ ಇಲ್ಲಿಯವರೆಗೆ ಭಿಕ್ಷಾಟನೆಯು ವ್ಯಾಪಕವಾಗಿ ಉಳಿದಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...