ರಾತ್ರಿ ಸರಿಯಾಗಿ ನಿದ್ರೆ ಬರದೇ ಇದ್ದಲ್ಲಿ ಅಥವಾ ಒತ್ತಡಗಳ ಕಾರಣದಿಂದಾಗಿ ಬೆಳಿಗ್ಗೆ ಹಾಸಿಗೆಯಿಂದ ಎದ್ದೊಡನೆ ತಲೆ ಸುತ್ತುವುದು, ತಲೆ ನೋವಿನ ಸಮಸ್ಯೆ ಕಾಡುತ್ತದೆ. ಹಾಗಂತ ಈ ಸಮಸ್ಯೆಯನ್ನು ನಿರ್ಲಕ್ಷಿಸುವ ಹಾಗಿಲ್ಲ. ಏಕೆಂದರೆ ಇದು ಪೋಸ್ಟುರಲ್ ಹೈಪೋಟೆನ್ಶನ್ ಆಗಿರಬಹುದು.
ಪೋಸ್ಟುರಲ್ ಹೈಪೋಟೆನ್ಶನ್ ಅನ್ನು ಆರ್ಥೋಸ್ಟೆಟಿಕ್ ಹೈಪೋಟೆನ್ಶನ್ ಎಂದೂ ಹೇಳುತ್ತಾರೆ. ಈ ತೊಂದರೆ ಇರುವವರಿಗೆ ಯಾವಾಗಲೂ ಬೆಳಿಗ್ಗೆ ತಲೆ ತಿರುಗುವುದು, ತಲೆ ನೋವು ಬರುತ್ತದೆ. ನಿಮ್ಮ ಬಿಪಿ ಕಡಿಮೆ ಇದ್ದಾಗಲೂ ಈ ರೀತಿಯ ಸಮಸ್ಯೆ ಕಂಡುಬರುತ್ತದೆ.
ಪೋಸ್ಟುರಲ್ ಹೈಪೋಟೆನ್ಶನ್ ಅಲ್ಲಿ ಎರಡು ವಿಧಗಳಿವೆ. ಕ್ಲಾಸಿಕ್ ಪೋಸ್ಟುರಲ್ ಹೈಪೋಟೆನ್ಶನ್ ಮತ್ತು ಡಿಲೆಡ್ ಪೋಸ್ಟುರಲ್ ಹೈಪೋಟೆನ್ಶನ್. ಕ್ಲಾಸಿಕ್ ಪೋಸ್ಟುರಲ್ ಹೈಪೋಟೆನ್ಶನ್ ಇರುವವರಿಗೆ ತಲೆ ನೋವು ಅಥವಾ ತಿರುಗುವ ಸಮಸ್ಯೆ ಹಾಸಿಗೆಯಿಂದ ಎದ್ದ ಮೂರು ನಿಮಿಷ ಮಾತ್ರ ಇರುತ್ತದೆ. ಡಿಲೆಡ್ ಪೋಸ್ಟುರಲ್ ಹೈಪೋಟೆನ್ಶನ್ ಇರುವವರಿಗೆ ಕೆಲ ನಿಮಿಷ, ಗಂಟೆ ಅಥವಾ ದಿನವಿಡೀ ತಲೆ ತಿರುಗುತ್ತಿರಬಹುದು. ಹಾಗಾಗಿ ಇದನ್ನು ನಿರ್ಲಕ್ಷಿಸಲೇಬಾರದು.
ಪೋಸ್ಟುರಲ್ ಹೈಪೋಟೆನ್ಶನ್ ನಿಂದ ಉಂಟಾಗುವ ಸಮಸ್ಯೆ :
ಪೋಸ್ಟುರಲ್ ಹೈಪೋಟೆನ್ಶನ್ ಸಾಮಾನ್ಯವಾಗಿ 60 ವರ್ಷ ಮೇಲ್ಪಟ್ಟವರಲ್ಲಿ ಕಾಣಿಸಿಕೊಳ್ಳುತ್ತದೆ. ಇದಕ್ಕೆ ಚಿಕಿತ್ಸೆ ಮಾಡಿಸದೇ ಇದ್ದಲ್ಲಿ ಹೃದಯದ ತೊಂದರೆ, ಮರೆಗುಳಿತನ (Dementia), ಡಿಪ್ರೆಶನ್ ನಂತಹ ಸಮಸ್ಯೆಗಳು ಎದುರಾಗುತ್ತವೆ. ಕೆಲವೊಮ್ಮೆ ಇದು ಜೀವಕ್ಕೂ ಹಾನಿಮಾಡಬಹುದು.
ಶುಗರ್ ಪ್ರಮಾಣ ಒಮ್ಮೆಲೇ ಏರಿಕೆ, ಇಳಿಕೆಯಾದಾಗ. ರಕ್ತಕ್ಕೆ ಆಕ್ಸಿಜನ್ ಸರಿಯಾಗಿ ತಲುಪದೆ ಇರುವುದ್ರಿಂದ, ಬ್ಲಡ್ ಸರ್ಕ್ಯುಲೇಶನ್ ಸಮಸ್ಯೆ ಇದ್ದಾಗ, ಕಿವಿಯ ಒಳಭಾಗದ ಸಮಸ್ಯೆಯಾದಾಗ, ಡೀ ಹೈಡ್ರೇಶನ್ ಅಥವಾ ಯಾವುದೋ ಇನ್ಫೆಕ್ಷನ್ ಆಗುವುದರಿಂದ. ಮೈಗ್ರೇನ್ ಟ್ರಿಗರ್ ಆಗುವ ಸಮಸ್ಯೆಯಿಂದ ಲಿವರ್ ತೊಂದರೆಯಿಂದ ಹಾಗೂ ಗರ್ಭಾವಸ್ಥೆಯ ಸಮಯದಲ್ಲೂ ಈ ಸಮಸ್ಯೆ ಕಾಡಬಹುದು.