ಬೇರೆ ಬ್ಯಾಂಕಿನ ಎಟಿಎಂನಿಂದ ಹಣ ವಿತ್ ಡ್ರಾ ಮಾಡಿದ್ರೆ ಸಂಬಂಧಪಟ್ಟ ಬ್ಯಾಂಕುಗಳು ಶುಲ್ಕ ವಿಧಿಸುವ ವಿಚಾರ ಎಲ್ಲರಿಗೂ ತಿಳಿದೇ ಇದೆ. ಆದರೆ ನೀವು ಎಟಿಎಂನಿಂದ ಡ್ರಾ ಮಾಡೋಕೆ ಹೊರಟ ಹಣಕ್ಕಿಂತ ಕಡಿಮೆ ಮೊತ್ತ ನಿಮ್ಮ ಬ್ಯಾಂಕಿನಲ್ಲಿದ್ದರೆ ನಿಮಗೆ ಬ್ಯಾಂಕ್ ಶುಲ್ಕ ವಿಧಿಸುತ್ತೆ ಅನ್ನೋ ವಿಚಾರ ಬಹುತೇಕ ಗ್ರಾಹಕರಿಗೆ ತಿಳಿದೇ ಇಲ್ಲ.
ಹೀಗಾಗಿ ಎಟಿಎಂನಿಂದ ಹಣ ಡ್ರಾ ಮಾಡುವ ಮೊದಲು ನಿಮ್ಮ ಖಾತೆಯಲ್ಲಿನ ಮೊತ್ತವನ್ನ ಪರಿಶೀಲನೆ ಮಾಡಿಕೊಳ್ಳೋದು ಒಳ್ಳೆಯದು.
ಖಾತೆಯಲ್ಲಿ ಎಷ್ಟು ಹಣವಿದೆ ಎಂದು ತಿಳಿದುಕೊಳ್ಳೋಕೆ ನಿಮಗೆ ಹಲವು ಮಾರ್ಗಗಳು ಗೊತ್ತಿರಬಹುದು. ಆದರೆ ಈ ರೀತಿ ಖಾತೆಯಲ್ಲಿದ್ದಕ್ಕಿಂತ ಹೆಚ್ಚು ಹಣವನ್ನ ಎಟಿಎಂನಲ್ಲಿ ನಮೂದಿಸಿ ನೀವು ಮಾಡುವ ವ್ಯವಹಾರಕ್ಕೆ ಬ್ಯಾಂಕ್ಗಳು ಎಷ್ಟು ಶುಲ್ಕ ವಿಧಿಸುತ್ತವೆ ಅನ್ನೋದ್ರ ಬಗ್ಗೆ ಇಲ್ಲಿದೆ ಮಾಹಿತಿ.
ಇಂತಹ ವಿಫಲ ವಹಿವಾಟುಗಳಿಗೆ ಕನಿಷ್ಟ 10 ರೂ. + ಜಿ.ಎಸ್.ಟಿ. ವಿಧಿಸಲಾಗುತ್ತದೆ. ಈ ಹಣ ವಿವಿಧ ಬ್ಯಾಂಕುಗಳ ಮೇಲೆಯೇ ಅವಲಂಬಿಸಿರಬಹುದು. ಹೀಗಾಗಿ ಇನ್ಮುಂದೆ ಎಟಿಎಂನಿಂದ ಹಣ ಡ್ರಾ ಮಾಡುವ ಮುನ್ನ ನಿಮ್ಮ ಖಾತೆಯಲ್ಲಿನ ಮೊತ್ತವನ್ನ ಒಮ್ಮೆ ಪರಿಶೀಲನೆ ಮಾಡಿಕೊಂಡಲ್ಲಿ ಅನಗತ್ಯ ಶುಲ್ಕದ ಹೊರೆಯಿಂದ ಪಾರಾಗಬಹುದಾಗಿದೆ.