ಬೆಂಗಳೂರು : ಪ್ರವಾಸೋದ್ಯಮ ಇಲಾಖೆಯಿಂದ ಫೆಬ್ರವರಿ 26, 27 ಮತ್ತು 28 ರಂದು ಬೆಂಗಳೂರಿನ ಅಂತರರಾಷ್ಟ್ರೀಯ ಕನ್ವೆನಶನ್ ಸೆಂಟರ್ನಲ್ಲಿ ಪ್ರವಾಸೋದ್ಯಮ ಕ್ಷೇತ್ರದಲ್ಲಿ ತೊಡಗಿಕೊಂಡಿರುವ ಹೊಟೆಲ್ ಉದ್ದಿಮೆದಾರರು, ಟ್ರಾವೆಲ್ ಏಜೆನ್ಸಿ, ಹೋಂ-ಸ್ಟೇ, ಕರಕುಶಲ ಮಳಿಗೆದಾರರು, ಪ್ರವಾಸೋದ್ಯಮ ಸ್ಟೇಕ್ ಹೋಲ್ಡರ್ಗಳಿಗೆ ವ್ಯಾಪಾರ-ವಹಿವಾಟು ಹೆಚ್ಚಿಸುವ ಕರ್ನಾಟಕ ಇಂಟರ್ನ್ಯಾಷನಲ್ ಟ್ರಾವೆಲ್ ಎಕ್ಸಪೊ-2025 ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಜಿಲ್ಲೆಯ ಆಸಕ್ತ ಹೊಟೆಲ್ ಉದ್ದಿಮೆದಾರರು, ಟ್ರಾವೆಲ್ ಏಜೆನ್ಸಿ, ಹೋಂ-ಸ್ಟೇ, ಕರಕುಶಲ ಮಳಿಗೆದಾರರು, ಪ್ರವಾಸೋದ್ಯಮ ಸ್ಟೇಕ್ ಹೋಲ್ಡರ್ಗಳು ತಮ್ಮ ಉದ್ದಿಮೆಗಳನ್ನು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳೊಂದಿಗೆ ವ್ಯವಹಾರ ಮಾಡಲು ಈ ಕಾರ್ಯಕ್ರಮದಲ್ಲಿ ವ್ಯಾಪಾರ ಮಳಿಗೆಗಳನ್ನು ಕಾಯ್ದಿರಿಸಲು ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕರ ಮೊ.ಸಂ:7892073482 ಗೆ ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.