alex Certify Dengue Fever : ರಾಜ್ಯದಲ್ಲಿ ‘ಡೆಂಗ್ಯೂ’ ಜ್ವರದ ಭೀತಿ : ಒಂದೇ ತಿಂಗಳಲ್ಲಿ 2489 ಕೇಸ್ ಪತ್ತೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Dengue Fever : ರಾಜ್ಯದಲ್ಲಿ ‘ಡೆಂಗ್ಯೂ’ ಜ್ವರದ ಭೀತಿ : ಒಂದೇ ತಿಂಗಳಲ್ಲಿ 2489 ಕೇಸ್ ಪತ್ತೆ

ಬೆಂಗಳೂರು : ಮಳೆಗಾಲದ ಹಿನ್ನೆಲೆ ರಾಜ್ಯದ ಹಲವು ಕಡೆ ‘ಡೆಂಗ್ಯೂ’ ಜ್ವರದ ಭೀತಿ ಹೆಚ್ಚಾಗುತ್ತಿದ್ದು, ಒಂದೇ ತಿಂಗಳಲ್ಲಿ 2489 ಕೇಸ್ ಪತ್ತೆಯಾಗಿದೆ. ನಿರಂತರ ಮಳೆಯಿಂದಾಗಿ ಜ್ವರ ಪ್ರಕರಣಗಳ ಸಂಖ್ಯೆ ಏರಿಕೆಯಾಗಿದೆ.

ಹೌದು. ರಾಜ್ಯದ ಹಲವೆಡೆ ‘ಡೆಂಗ್ಯೂ’ಅಟ್ಟಹಾಸ ಜೋರಾಗಿದ್ದು, ಜುಲೈ ತಿಂಗಳಿನಲ್ಲಿಯೇ ಬರೋಬ್ಬರಿ 2,489 ಪ್ರಕರಣಗಳು ದೃಢವಾಗಿದೆ. ಈವರೆಗೆ ಒಟ್ಟು 4,739 ಪ್ರಕರಣ ಕಾಣಿಸಿಕೊಂಡಿವೆ  ಎಂಬ ಮಾಹಿತಿ ಲಭ್ಯವಾಗಿದೆ.

ಡೆಂಗ್ಯೂ ಜ್ವರ ಮತ್ತು ಅಪಾಯಕಾರಿ ಸೊಳ್ಳೆಗಳಿಂದ ಪಾರಾಗುವುದು ಹೇಗೆ….?

ಮಳೆಗಾಲದಲ್ಲಿ ಡೆಂಗ್ಯೂ ಅಪಾಯ ಹೆಚ್ಚಾಗಿರುತ್ತದೆ. ಸಾಮಾನ್ಯವಾಗಿ ಡೆಂಗ್ಯೂ ಜ್ವರ ಕಾಣಿಸಿಕೊಳ್ಳೋದು ಸೊಳ್ಳೆ ಕಡಿತದಿಂದ. ಡೆಂಗ್ಯೂ ಜ್ವರ ವ್ಯಕ್ತಿಯನ್ನು ಸಂಪೂರ್ಣವಾಗಿ ದುರ್ಬಲಗೊಳಿಸುತ್ತದೆ. ಕೆಲವೊಮ್ಮೆ ಮಾರಣಾಂತಿಕವೂ ಆಗಬಹುದು.

ಕೆಲವೊಂದು ಟಿಪ್ಸ್ ಫಾಲೋ ಮಾಡಿದ್ರೆ ಅಪಾಯಕಾರಿ ಸೊಳ್ಳೆ ಕಡಿತವನ್ನು ತಪ್ಪಿಸಿಕೊಳ್ಳಬಹುದು. ಡೆಂಗ್ಯೂವಿನಂತಹ ಮಾರಕ ಕಾಯಿಲೆಗಳಿಂದಲೂ ದೂರವಿರಬಹುದು.

ನೀವು ಡೆಂಗ್ಯೂ ಜ್ವರದಿಂದ ತಪ್ಪಿಸಿಕೊಳ್ಳಲು ಬಯಸಿದರೆ ಮೊದಲು ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಬೇಕು. ಇದಕ್ಕಾಗಿ ಮನೆಯಿಂದ ಹೊರಹೋಗುವಾಗ ಎರಡೂ ಕೈ ಮತ್ತು ಪಾದಗಳನ್ನು ಸಂಪೂರ್ಣ ಮುಚ್ಚಿಕೊಳ್ಳಿ. ನೀವು ತೋಳಿಲ್ಲದ ಬಟ್ಟೆಗಳನ್ನು ಧರಿಸಲು ಬಯಸಿದರೆ, ಸೊಳ್ಳೆ ಕಡಿತವನ್ನು ತಪ್ಪಿಸಲು ಲೋಶನ್ಗಳನ್ನು ಸವರಿಕೊಳ್ಳಿ. ಇದಲ್ಲದೇ ಮಲಗುವಾಗ ಸೊಳ್ಳೆ ಪರದೆ ಬಳಸಿ.

ಮಳೆಗಾಲದಲ್ಲಿ ಡೆಂಗ್ಯೂ ಹರಡುವ ಸಾಧ್ಯತೆ ಹೆಚ್ಚು, ಅದಕ್ಕಾಗಿಯೇ ಈ ಅವಧಿಯಲ್ಲಿ ನೀವು ಮನೆಯ ಕಿಟಕಿ ಬಾಗಿಲುಗಳನ್ನು ಮುಚ್ಚುವುದು ಮುಖ್ಯ. ಹೀಗೆ ಮಾಡುವುದರಿಂದ ಸೊಳ್ಳೆಗಳು ಮನೆಯೊಳಗೆ ಬರದಂತೆ ತಡೆಯಬಹುದು.

ಕೊಳೆ ಇದ್ದಲ್ಲಿ ಸೊಳ್ಳೆಗಳು ಹೆಚ್ಚು ಸಂತಾನೋತ್ಪತ್ತಿ ಮಾಡುತ್ತವೆ. ಮಳೆಯ ನೀರು ಸಂಗ್ರಹವಾದಾಗ ಅಂತಹ ಸ್ಥಳಗಳಲ್ಲಿ ಮೊಟ್ಟೆಗಳನ್ನು ಇಡುತ್ತವೆ. ಹಾಗಾಗಿ ಮನೆಯ ಸುತ್ತ ಮುತ್ತ ನೀರು ಸಂಗ್ರಹವಾಗದಂತೆ ನೋಡಿಕೊಳ್ಳಿ. ಎಲ್ಲೆಂದರಲ್ಲಿ ಕಸ ಶೇಖರಣೆಯಾಗದಂತೆ ಜಾಗೃತೆ ವಹಿಸಿ. ಮನೆಯನ್ನು ಆದಷ್ಟು ಸ್ವಚ್ಛವಾಗಿರಿಸಿ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...