SHOCKING : ವಿಮೆ ಹಣಕ್ಕಾಗಿ ಬದುಕಿದ್ದ ಮಗನನ್ನೇ ಸಾಯಿಸಿದ ಪಾಪಿ ತಂದೆ.!

ನವದೆಹಲಿ: ಇನ್ಶೂರೆನ್ಸ್ ಹಣಕ್ಕಾಗಿ ತಂದೆಯೊಬ್ಬ ಬದುಕಿದ್ದ ಮಗನನ್ನೇ ಸಾವನ್ನಪ್ಪಿದ್ದಾನೆ ಎಂದು ಬಿಂಬಿಸಿರುವ ಘಟನೆ ದೆಹಲಿಯಲ್ಲಿ ಬೆಳಕಿಗೆ ಬಂದಿದೆ.

ಮಾ.5ರಂದು ರಾತ್ರಿ ನಜಾಫಗಢದ ಫಿರ್ನಿ ರಸ್ತೆಯಲ್ಲಿ ಎರಡು ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿದೆ ಓರ್ವ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದ. ಬಳಿಕ ಸಾವನ್ನಪ್ಪಿದ್ದಾನೆ ಎಂದು ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು. ಮೃತ ವ್ಯಕ್ತಿಯ ಅಂತ್ಯಕ್ರಿಯೆಯನ್ನೂ ನೆರವೇರಿಸಲಾಗಿದೆ ಎಂದು ಆತನ ತಂದೆ ಸುತ್ತಮುತ್ತಲ ಹಳ್ಳಿಗೆ ಸುದ್ದಿ ಹಬ್ಬಿಸಿದ್ದ. ಅಪಘಾತದ ತೀವ್ರತೆಗೆ ಗಂಭೀರವಾಗಿ ಗಾಯಗೊಂಡು ದೇಹ ನುಜ್ಜುಗುಜ್ಜಾಗಿದ್ದರಿಂದ ಗಂಗಾನದಿಯ ದಡದಲ್ಲಿ ಮೃತದೇಹ ದಹನ ಮಾಡಲಾಗಿದೆ ಎಂದು ವ್ಯಕ್ತಿ ತಿಳಿಸಿದ್ದ.

ಇದೇ ಕಥೆ ಹೇಳಿ ಮಗನ ಮರಣ ಪ್ರಮಾಣ ಪತ್ರವನ್ನೂ ಪಡೆದುಕೊಂಡಿದ್ದಾರೆ. ಹದಿಮೂರನೇ ದಿನ ಭೋಜನಕೂಟವನ್ನೂ ಆಯೋಜಿಸಿದ್ದರು. ಮಗನ ಹೆಸರಲ್ಲಿದ್ದ ಇನ್ಶೂರೆನ್ಸ್ ಹಣ ಪಡೆಯಲು ಪ್ರಕ್ರಿಯೆಯನ್ನು ಆರಂಭಿಸಿದ್ದರು. ಈ ವೇಳೆ ಇನ್ಶೂರೆನ್ಸ್ ಕಂಪನಿಯವರು ಪೊಲೀಸ್ ದಾಖಲೆ ಕೇಳಿದ್ದಾರೆ. ವಕೀಲನೊಬ್ಬ ಪೊಲೀಸ್ ಠಾಣೆಗೆ ಬಂದು ಮೃತ ವ್ಯಕ್ತಿಯ ಬೈಕ್ ಗೆ ಡಿಕ್ಕಿ ಹೊಡೆದ ಇನ್ನೊಬ್ಬ ಬೈಕ್ ಸವಾರ ಎಂದು ನಕಲಿ ವ್ಯಕ್ತಿಯನ್ನು ಹಾಜರುಪಡಿಸಿದ್ದರು. ನಕಲಿ ಯುವಕ ತನ್ನ ಬೈಕ್ ಗೆ ಇನ್ನೊಂದು ಬೈಕ್ ಡಿಕ್ಕಿಯಾಗಿ ಓರ್ವ ಸತ್ತಿದ್ದಾಗಿ ಹೇಳಿದ್ದಾನೆ. ಪ್ರಕರಣದ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದಾಗ ಅಸಲಿಗೆ ಯಾವುದೇ ವ್ಯಕ್ತಿ ಅಪಘಾತದಲ್ಲಿ ಸತ್ತಿಲ್ಲ ಎಂಬುದು ಗೊತ್ತಾಗಿದೆ.

ವಿಮಾ ಕಂಪನಿಯಿಂದ 2 ಕೋಟಿ ರೂಪಾಯಿ ಇನ್ಶೂರೆನ್ಸ್ ಹಣಕ್ಕಾಗಿ ತಂದೆಯೇ ಮಗ ಅಪಘಾತದಲ್ಲಿ ಸತ್ತಿದ್ದಾನೆಂದು ಕಥೆ ಕಟ್ಟಿರುವುದು ಬಯಲಾಗಿದೆ. ಎಫ್ಐಆರ್ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳನ್ನು ಬಂಧಿಸಿ ತನಿಖೆ ಮುಂದುವರೆಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read