ಕಾರಿನಿಂದ ಹಾರಿ ಬಂತು ರಾಶಿ ರಾಶಿ ನೋಟು….! ವಿಡಿಯೋ ಫುಲ್ ವೈರಲ್

ಚಲಿಸುತ್ತಿದ್ದ ಕಾರಿನಿಂದ ನೋಟುಗಳನ್ನು ತೂರಿದ ಪ್ರಕರಣ ಗುರುಗ್ರಾಮದಲ್ಲಿ ನಡೆದಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬಳಿಕ ದೆಹಲಿ ಮೂಲದ ಯೂಟ್ಯೂಬರ್ ಜೋರಾವರ್ ಸಿಂಗ್ ಕಲ್ಸಿ ಸೇರಿದಂತೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಶಾಹಿದ್ ಕಪೂರ್ ಅಭಿನಯದ ‘ಫರ್ಜಿ’ ವೆಬ್ ಸೀರೀಸ್ ನಿಂದ ಪ್ರೇರಿತಗೊಂಡಿದ್ದ ಜೋರಾವರ್ ಸಿಂಗ್ ಹಾಗೂ ಆತನ ಸ್ನೇಹಿತ ಗುರುಪ್ರೀತ್ ಸಿಂಗ್ ಈ ದೃಶ್ಯವನ್ನು ಮರು ಸೃಷ್ಟಿಸಲು ಬಯಸಿದ್ದರು. ಹೀಗಾಗಿ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಚಲಿಸುತ್ತಿದ್ದ ಕಾರಿನಿಂದ ನೋಟು ತೂರಿದ್ದರು.

ಇವರನ್ನು ಬೈಕಿನಲ್ಲಿ ಹಿಂಬಾಲಿಸುತ್ತಿದ್ದ ಇತರ ಇಬ್ಬರು ಸ್ನೇಹಿತರು ಈ ದೃಶ್ಯವನ್ನು ವಿಡಿಯೋ ಮಾಡಿಕೊಂಡಿದ್ದು, ನಂತರ ಸಾಮಾಜಿಕ ಜಾಲತಾಣ ಯುಟ್ಯೂಬ್ ಸೇರಿದಂತೆ ವಿವಿಧ ಪ್ಲಾಟ್ ಫಾರ್ಮ್ ಗಳಲ್ಲಿ ಹರಿ ಬಿಡಲಾಗಿತ್ತು. ನಂತರ ವೈರಲ್ ಆದ ಈ ವಿಡಿಯೋವನ್ನು ನೋಡಿದ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read