
ತೋಟಗಾರಿಕೆ ಇಲಾಖೆಯಿಂದ 2023-24ನೇ ಸಾಲಿಗೆ ಕೆಎಂಇಆರ್‍ಸಿಯ ಸಿಇಪಿಎಂಐಜೆಡ್ ಯೋಜನೆಯಡಿ ವಿವಿಧ ತೋಟಗಾರಿಕೆ ಸೌಲಭ್ಯಗಳಿಗಾಗಿ ಅರ್ಹ ತೋಟಗಾರಿಕೆ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ.
ಈರುಳ್ಳಿ ಶೇಖರಣೆ ಘಟಕ ಹಾಗೂ ಫಾರಂ ಗೇಟ್ ಘಟಕಗಳು ನಿರ್ಮಾಣಕ್ಕಾಗಿ ಮತ್ತು ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯ ಮಗಾ ಮೈಕ್ರೋ ಆಗ್ರಿ-ಹಾರ್ಟಿ ಸಿಸ್ಟಮ್ ಕಾರ್ಯಕ್ರಮದಡಿ ಅನುಷ್ಟಾನಗೊಳಿಸಲಾಗುತ್ತಿರುವ ತೋಟಗಾರಿಕೆ ಬೆಳೆಗಳಾದ ಮಾವು, ಸೀತಾಫಲ, ಸೀಬೆ, ಗೇರು, ಹುಣಸೆ, ನೇರಳೆ ಮತ್ತು ಎಳೆನೀರು ತೆಂಗಿನಕಾಯಿ ಹೊಸ ಪ್ರದೇಶ ವಿಸ್ತರಣೆ ಕಾರ್ಯಕ್ರಮ, ಬಯೋಡೈಜೆಸ್ಟರ್, ಅರಣ್ಯ ಬೆಳೆಗಳಾದ ಸಾಗುವಾನಿ, ಮಹಾಗನಿ ಮತ್ತು ಶ್ರೀಗಂಧ ಬೆಳೆಯಲು ಅರ್ಜಿ ಆಹ್ವಾನಿಸಲಾಗಿದೆ.