ಬೆಂಗಳೂರು: ಸುಳ್ಳು ಸುದ್ದಿಗಳಿಗೆ ಬ್ರೇಕ್ ಹಾಕಲು ಮುಂದಾಗಿರುವ ರಾಜ್ಯ ಸರ್ಕಾರ ಫ್ಯಾಕ್ಟ್ ಚೆಕ್ ಯುನಿಟ್ ಆರಂಭಿಸಿದೆ. ಸುದ್ದಿಗಳನ್ನು ನಿಭಾಯಿಸಲು ಪ್ರತ್ಯೇಕ ಘಟಕವನ್ನು ಸ್ಥಾಪಿಸಲು ಮುಂದಾಗಿದೆ.
ಫ್ಯಾಕ್ಟ್ ಚೆಕ್ ಯುನಿಟ್ ಗೆ ಕಂಪನಿಗಳ ನೋಂದಣಿಗೆ ಸರ್ಕಾರ ಟೆಂಡರ್ ಕರೆದಿದ್ದು, 7 ಕಂಪನಿಗಳು ಈಗಾಗಲೇ ನೊಂದಾಯಿಸಿಕೊಂಡಿವೆ. ಅವುಗಳಲ್ಲಿ ಐದು ಕಂಪನಿಗಳ ಶಾರ್ಟ್ ಲಿಸ್ಟ್ ಮಾಡಲಾಗಿದೆ.
ಇಲಾಖೆಯು ಕಂಪನಿಗಳ ಹಿನ್ನೆಲೆ ಪರಿಶೀಲನೆ ನಡೆಸಿದ್ದು, ನಂತರ ಹೆಸರು ಬಹಿರಂಗಪಡಿಸಲಿದೆ. ಐದು ಕಂಪನಿಗಳೇ ಬಹುತೇಕ ಫೈನಲ್ ಆಗುವ ಸಾಧ್ಯತೆ ಇದೆ ಎಂದು ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಈ ಕಂಪನಿಗಳು ಕೃತಕ ಬುದ್ಧಿಮತ್ತೆ, ದತ್ತಾಂಶ ವಿಶ್ಲೇಷಣೆ ಮತ್ತು ನಕಲಿ ಸುದ್ದಿಗಳನ್ನು ತಡೆಯುವ ಮತ್ತು ಫ್ಯಾಕ್ಟ್ ಚೆಕ್ ನಲ್ಲಿ ಸಾಕಷ್ಟು ಅನುಭವ ಹೊಂದಿದೆ ಎಂದು ತಿಳಿಸಿದ್ದಾರೆ. ಕಂಪನಿಗಳು ಭಾರತೀಯ ಮೂಲದವುಗಳಾಗಿರಬೇಕು ಹಾಗೂ ಫ್ಯಾಕ್ಟ್ ಚೆಕಿಂಗ್ ಸೇವೆಗಳು ಅಥವಾ ಅಂತಹ ಚಟುವಟಿಕೆಗಳಲ್ಲಿ ಕನಿಷ್ಠ ಮೂರು ವರ್ಷ ಅನುಭವವಿರಬೇಕು. ಸರ್ಕಾರ ವಿಶ್ವಾಸಾರ್ಹ ಕೆಲಸ ಮಾಡಿದ ಕಂಪನಿಗಳನ್ನು ಮಾತ್ರ ಗುರುತಿಸಲಿದೆ ಎಂದು ವಿವರಿಸಿದ್ದಾರೆ.