ಜರ್ಮನ್ ತಯಾರಕ BMW ಮೊಟೊರಾಡ್ ಶೀಘ್ರದಲ್ಲೇ ತನ್ನ ಬಾಕ್ಸರ್ ಶ್ರೇಣಿಯಲ್ಲಿ ಮುಂಬರುವ ಮಾದರಿಗಳಲ್ಲಿ ಫೇಸ್ ರೆಕಗ್ನಿಷನ್ ಸೌಲಭ್ಯ ತರಲಿದೆ. ಇದು ವಿಶ್ವದಲ್ಲೇ ಮೊದಲ ಪ್ರಯೋಗವಾಗಲಿದೆ.
ಚಾಲಕ/ ವಾಹನ ಸವಾರನ ಫೇಸ್ ಗುರುತಿಸಿದಾಗ ಮಾತ್ರ ವಾಹನವನ್ನು ಅನ್ಲಾಕ್ ಮಾಡಲು ಅನುಮತಿಸುವ ವ್ಯವಸ್ಥೆ ಇದಾಗಿರಲಿದೆ. ಈ ಮೂಲಕ ಕಳ್ಳತನದ ವಿರುದ್ಧ ಹೋರಾಡುವುದು ಫೇಸ್ ರೆಕಗ್ನಿಷನ್ ಹಿಂದಿನ ಪರಿಕಲ್ಪನೆಯಾಗಿದೆ.
BMW ಮೊಟೊರಾಡ್ ಈ ರೀತಿಯ ತಂತ್ರಜ್ಞಾನವನ್ನು ಪರಿಚಯಿಸಿದ ವಿಶ್ವದ ಮೊದಲ ಮೋಟಾರ್ ಸೈಕಲ್ ತಯಾರಕ ಎಂದು ನಂಬಲಾಗಿದೆ. ನೂತನ ಮಾದರಿಯನ್ನು BMW iFace ಎಂದು ಹೆಸರಿಸಿದೆ.
ಈ ಫೇಶಿಯಲ್ ರೆಕಗ್ನಿಷನ್ ಸಿಸ್ಟಮ್ ಮೋಟಾರ್‌ಸೈಕಲ್‌ನ TFT ಡಿಸ್ಪ್ಲೇಗೆ ನೇರವಾಗಿ ಸಂಯೋಜಿಸಲಾದ 3D ತಂತ್ರಜ್ಞಾನವನ್ನು ಬಳಸುತ್ತದೆ. ಹೆಲ್ಮೆಟ್ ತೆಗೆದ ನಂತರ, ಮುಖವನ್ನು ಮೂರು ಆಯಾಮಗಳಲ್ಲಿ ಬಯೋಮೆಟ್ರಿಕ್ ಸ್ಕ್ಯಾನ್ ಮಾಡಲಾಗುತ್ತದೆ.
ಈ ಮೂರು ಆಯಾಮದ ಚಿತ್ರವನ್ನು ಸಿಸ್ಟಂನಲ್ಲಿ ಸಂಗ್ರಹವಾಗಿರುವ ಪೂರ್ವ-ನೋಂದಾಯಿತ ಡೇಟಾಗೆ ಹೋಲಿಸಲಾಗುತ್ತದೆ. ವಾಹನ ಸವಾರ ಹೆಲ್ಮೆಟ್ ಧರಿಸಿದ್ದರೆ, ಕಣ್ಣುಗಳ ಐರಿಸ್ ಮತ್ತು ಕಾರ್ನಿಯಾವನ್ನು ಸ್ಕ್ಯಾನ್ ಮಾಡುವ ಮೂಲಕ ಗುರುತಿಸಬಹುದು.
ಎಲ್ಲಾ ಸಂದರ್ಭಗಳಲ್ಲಿ ವ್ಯಕ್ತಿಯನ್ನು ಗುರುತಿಸಿದರೆ, ಇಗ್ನಿಷನ್, ಸ್ಟೀರಿಂಗ್ ಲಾಕ್ ಮತ್ತು ಇತರ ಲಾಕಿಂಗ್ ಕಾರ್ಯಗಳು ಬಿಡುಗಡೆಯಾಗುತ್ತವೆ. ಆಗ ವಾಹನ ಸವಾರನು ಮೋಟಾರ್ ಸೈಕಲನ್ನು ಪ್ರಾರಂಭಿಸಬಹುದು.
ಯಾರಾದರೂ ಮೋಟಾರ್ ಸೈಕಲ್ ಕದಿಯಲು ಪ್ರಯತ್ನಿಸಿದರೆ, BMW iFace ನಂತರ eCall ತುರ್ತು ಕರೆ ಸೇವೆಯೊಂದಿಗೆ ಸಂವಹನ ನಡೆಸುತ್ತದೆ. ಅಂತಹ ಸಂದರ್ಭಗಳಲ್ಲಿ, ಮುಖ ಅಥವಾ ಕಣ್ಣಿನ ಸ್ಕ್ಯಾನ್‌ಗಳು ಮತ್ತು ಮೋಟಾರ್ ಸೈಕಲ್‌ನ GPS ಸ್ಥಾನದಿಂದ ಡೇಟಾವನ್ನು ಸ್ವಯಂಚಾಲಿತವಾಗಿ ಪೊಲೀಸ್ ಅಧಿಕಾರಿಗಳಿಗೆ ರವಾನಿಸಲಾಗುತ್ತದೆ .
BMW iFace 2023 ರ ಶರತ್ಕಾಲದಲ್ಲಿ ಅಧಿಕೃತವಾಗಿ BMW ಮೊಟೊರಾಡ್ ಬಾಕ್ಸರ್ ಮಾದರಿಗಳಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ.