alex Certify ಕಣ್ಣುಗಳ ಕಿತ್ತು, ಖಾಸಗಿ ಅಂಗ ಕತ್ತರಿಸಿ ಅರ್ಚಕನ ಬರ್ಬರ ಹತ್ಯೆ: ಹಿಂಸಾಚಾರಕ್ಕೆ ತಿರುಗಿದ ಸ್ಥಳೀಯರ ಪ್ರತಿಭಟನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಣ್ಣುಗಳ ಕಿತ್ತು, ಖಾಸಗಿ ಅಂಗ ಕತ್ತರಿಸಿ ಅರ್ಚಕನ ಬರ್ಬರ ಹತ್ಯೆ: ಹಿಂಸಾಚಾರಕ್ಕೆ ತಿರುಗಿದ ಸ್ಥಳೀಯರ ಪ್ರತಿಭಟನೆ

ಪಾಟ್ನಾ: ಕಣ್ಣುಗಳನ್ನು ಕಿತ್ತು, ಖಾಸಗಿ ಅಂಗ ಕತ್ತರಿಸಿ ಅರ್ಚಕನ ಹತ್ಯೆ ಮಾಡಲಾಗಿದೆ. ಗುಂಡೇಟು ತಗುಲಿರುವ ಶವ ಪತ್ತೆಯಾದ ನಂತರ ಆಕ್ರೋಶಗೊಂಡ ಸ್ಥಳೀಯರು ನಡೆಸಿದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದೆ.

ಡಿಸೆಂಬರ್ 16ರ ಶನಿವಾರ ಬಿಹಾರದ ಗೋಪಾಲ್‌ ಗಂಜ್ ಜಿಲ್ಲೆಯಲ್ಲಿ ಅರ್ಚಕನನ್ನು ಗುಂಡಿಕ್ಕಿ ಕೊಂದು ಅವರ ಕಣ್ಣುಗಳನ್ನು ಕಿತ್ತು ಹಾಕಲಾಗಿದೆ. ಜನನಾಂಗಗಳನ್ನು ಸಹ ಕತ್ತರಿಸಲಾಗಿದೆ. ಮೃತ ವ್ಯಕ್ತಿ ಕಳೆದ ಐದು ದಿನಗಳಿಂದ ನಾಪತ್ತೆಯಾಗಿದ್ದು, ಶನಿವಾರ ಮೃತದೇಹ ಪತ್ತೆಯಾಗಿದೆ.

ಮೃತನನ್ನು ಮನೋಜ್ ಕುಮಾರ್ ಎಂದು ಗುರುತಿಸಲಾಗಿದೆ. ಅವರು ಗೋಪಾಲ್ ಗಂಜ್ ಜಿಲ್ಲೆಯ ದಾನಾಪುರ ಗ್ರಾಮದ ಶಿವ ದೇವಾಲಯದಲ್ಲಿ ಅರ್ಚಕರಾಗಿ ಕೆಲಸ ಮಾಡುತ್ತಿದ್ದರು. ಅವರ ಸಹೋದರ ಅಶೋಕ್ ಕುಮಾರ್ ಶಾ ಬಿಜೆಪಿಯ ವಿಭಾಗೀಯ ಅಧ್ಯಕ್ಷರಾಗಿದ್ದರು.

ಕುಮಾರ್ ಮನೆಯಿಂದ ದೇವಸ್ಥಾನಕ್ಕೆ ಹೋಗಿದ್ದವರು ನಾಪತ್ತೆಯಾಗಿದ್ದರು. ಶೋಧ ಕಾರ್ಯಾಚರಣೆ ಆರಂಭಿಸಿದರೂ ಆತನನ್ನು ಪತ್ತೆ ಹಚ್ಚಲು ಪೊಲೀಸರಿಗೆ ಸಾಧ್ಯವಾಗಿರಲಿಲ್ಲ. ಶನಿವಾರ ಅವರ ಮನೆ ಸಮೀಪದ ಮಾಂಜಾ ಮಿಲ್ಕ್ ಫ್ಯಾಕ್ಟರಿ ಬಳಿಯ ಪೊದೆಗಳಲ್ಲಿ ಶವ ಪತ್ತೆಯಾಗಿದೆ.

ಕುಮಾರ್ ಅವರ ಕುತ್ತಿಗೆಗೆ ಗುಂಡು ಹಾರಿಸಲಾಗಿದ್ದು, ಎರಡೂ ಕಣ್ಣುಗಳನ್ನು ಕಿತ್ತು ಹಾಕಲಾಗಿದೆ. ಅವರ ಖಾಸಗಿ ಅಂಗಗಳಿಗೂ ಹಾನಿಯಾಗಿದೆ ಎಂದು ಕುಟುಂಬದವರು ಹೇಳಿದ್ದಾರೆ.

ಘಟನೆ ಬೆಳಕಿಗೆ ಬಂದ ಕೂಡಲೇ ಪೊಲೀಸರು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಸ್ಥಳೀಯರು ಆರೋಪಿ ಪ್ರತಿಭಟಿಸಿದ್ದಾರೆ. ಸ್ಥಳದಲ್ಲಿ ಘರ್ಷಣೆ ಉಂಟಾಗಿದೆ. ಸ್ಥಳೀಯರು ಮೇಲೆ ಕಲ್ಲು ತೂರಾಟ ನಡೆಸಿದ್ದು, ಘರ್ಷಣೆಯಲ್ಲಿ ಇಬ್ಬರು ಪೊಲೀಸ್ ಅಧಿಕಾರಿಗಳಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಪೊಲೀಸ್ ವಾಹನಕ್ಕೂ ಬೆಂಕಿ ಹಚ್ಚಲಾಗಿದೆ. ಪರಿಸ್ಥಿತಿ ಹಿಂಸಾಚಾರಕ್ಕೆ ತಿರುಗಿದ ಹಿನ್ನೆಲೆಯಲ್ಲಿ ಪೊಲೀಸರು ಐವರನ್ನು ಬಂಧಿಸಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...