ಗಮನಿಸಿ : ವಿಕಲಚೇತನರ ರಿಯಾಯಿತಿ ದರದ ಬಸ್ ಪಾಸ್ ಫೆ.28 ರವರೆಗೆ ವಿಸ್ತರಣೆ

ಪ್ರಸಕ್ತ (2023) ಸಾಲಿನಲ್ಲಿ ವಿತರಿಸಲಾಗಿದ್ದ ವಿಕಲಚೇತನರ ರಿಯಾಯಿತಿ ದರದ ಬಸ್‍ಪಾಸ್‍ಗಳನ್ನು ಫೆಬ್ರವರಿ, 28 ರವರೆಗೆ ಮಾನ್ಯ ಮಾಡಲಾಗಿದೆ.

ಪ್ರಸ್ತುತ ಸಾಲಿನಲ್ಲಿ ವಿಕಲಚೇತನರ ಪಾಸುದಾರರ ನವೀಕರಣ/ ಹೊಸ ಪಾಸು ಪಡೆಯುವ ಫಲನುಭವಿಗಳೆಲ್ಲರೂ ಅರ್ಜಿಯನ್ನು ಸೇವಾ ಸಿಂಧುಪೋರ್ಟಲ್ ಮುಖಾಂತರ ಅರ್ಜಿ ಸಲ್ಲಿಸಬೇಕಿದೆ. ಸೇವಾಸಿಂಧು ಪೋರ್ಟಲ್ https://sevasinduservices.karnataka.gov.in ನಲ್ಲಿ ಅರ್ಜಿಯನ್ನು ಸಲ್ಲಿಸುವಾಗ ವಿಕಲಚೇತನರು ವಾಸ್ತವ್ಯದ ದೃಢೀಕರಣ, ಆಧಾರ್ ಕಾರ್ಡ್ ಪ್ರತಿ, ಪಾಸಪೋರ್ಟ್ ಸೈಜಿನ ಫೋಟೋ ಹಾಗೂ ಯು.ಡಿ.ಐ.ಡಿ/ ಗುರುತಿನ ಚೀಟಿಯನ್ನು ಆನ್‍ಲೈನ್‍ನಲ್ಲಿ ಅಪ್‍ಲೋಡ್ ಮಾಡುವುದು.

ಆಯಾಯ ತಾಲ್ಲೂಕಿನ ಘಟಕದಲ್ಲಿ ಪಾಸುಗಳನ್ನು ಪಡೆಯುವುದು. ಹೊಸದಾಗಿ ಪಾಸ್ ಪಡೆಯುವವರು ವಿಭಾಗೀಯ ಕಚೇರಿ ಪುತ್ತೂರಿನಲ್ಲಿ ಪಡೆಯುವುದು. ಪಾಸು ಪಡೆಯುವ ಸಮಯದಲ್ಲಿ ಸಲ್ಲಿಸಿದ ಅರ್ಜಿಯ ಪ್ರತಿ ವಾಸ್ತವ್ಯದ ದೃಢೀಕರಣ, ಆಧಾರ್ ಕಾರ್ಡ್ ಜೆರಾಕ್ಸ್ ಪ್ರತಿ, ಯು.ಡಿ.ಐ.ಡಿ ಚೀಟಿಯ ಜೆರಾಕ್ಸ್ ಪ್ರತಿ ಮತ್ತು ಮೂಲ ಪ್ರತಿ, ಪಾಸ್ ಪೋರ್ಟ್ ಸೈಜಿನ 02 ಫೊಟೋ, ಅಂಚೆ ಚೀಟಿ ಗಾತ್ರದ 01 ಫೊಟೋ ಹಾಗೂ ಯು.ಡಿ.ಐ.ಡಿ ಚೀಟಿಯ ಮಾನ್ಯತಾ ಅವಧಿಯನ್ನು ಪರಿಶೀಲನೆ ಮಾಡುವ ಸಲುವಾಗಿ ಪರಿಶೀಲನೆಗಾಗಿ ತೋರಿಸತಕ್ಕದ್ದು ಹಾಗೂ ರೂ.660 ಪಾವತಿ ಮಾಡಿ ಪಾಸನ್ನು ಪಡೆಯಬೇಕು. ಹೆಚ್ಚಿನ ಮಾಹಿತಿಗೆ ಕಚೇರಿ ದೂರವಾಣಿ ಸಂಖ್ಯೆ. 08272-295829 ನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿ ಅವರು ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read