ಮಾಜಿ ಅಗ್ನಿವೀರರಿಗೆ CISF, BSF, SSB ಯಲ್ಲಿ ಶೇ. 10 ರಷ್ಟು ಮೀಸಲಾತಿ, ವಯೋಮಿತಿ ಸಡಿಲಿಕೆ ಘೋಷಣೆ

ನವದೆಹಲಿ: ಗಡಿ ಭದ್ರತಾ ಪಡೆ(BSF) ಬುಧವಾರ ತನ್ನ ಶ್ರೇಣಿಯಲ್ಲಿ ಮಾಜಿ ಅಗ್ನಿವೀರ್‌ ಗಳನ್ನು ಸೇರಿಸಿಕೊಳ್ಳಲು ಮಹತ್ವದ ನೀತಿ ಬದಲಾವಣೆಯನ್ನು ಘೋಷಿಸಿದೆ.

ತಮ್ಮ ನಾಲ್ಕು ವರ್ಷಗಳ ಅಧಿಕಾರಾವಧಿಯಲ್ಲಿ ಅಗ್ನಿವೀರರು ಪಡೆದ ಅನುಭವ ಮತ್ತು ತರಬೇತಿಯು ಅವರನ್ನು ಪಡೆಗೆ ಸೂಕ್ತ ಅಭ್ಯರ್ಥಿಗಳನ್ನಾಗಿ ಮಾಡುತ್ತದೆ ಎಂದು ಗೃಹ ವ್ಯವಹಾರಗಳ ಸಚಿವಾಲಯ ಗಮನಿಸಿದೆ.

BSFನ ಮಹಾನಿರ್ದೇಶಕರು ಘೋಷಿಸಿದ ಈ ನಿರ್ಧಾರವು ಈ ಮಾಜಿ ಸೈನಿಕರಿಗೆ 10% ಮೀಸಲಾತಿ ಮತ್ತು ವಯಸ್ಸಿನ ಸಡಿಲಿಕೆಯನ್ನು ಒಳಗೊಂಡಿದೆ. ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಮತ್ತು ಗೃಹ ಸಚಿವ ಅಮಿತ್ ಶಾ ಅವರ ಮಾರ್ಗದರ್ಶನದಲ್ಲಿ ಕೈಗೊಂಡ ನಿರ್ಧಾರವು ಬಿಎಸ್ಎಫ್ ಅನ್ನು ಬಲಪಡಿಸುವ ಗುರಿ ಹೊಂದಿದೆ ಎಂದು ಗೃಹ ಸಚಿವಾಲಯ ತಿಳಿಸಿದೆ.

ಸಿಐಎಸ್ಎಫ್

ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ(ಸಿಐಎಸ್‌ಎಫ್) ಮಾಜಿ ಅಗ್ನಿವೀರ್‌ಗಳನ್ನು ನೇಮಿಸಲು ಸಿದ್ಧವಾಗಿದೆ ಎಂದು ಗೃಹ ವ್ಯವಹಾರಗಳ ಸಚಿವಾಲಯ ತಿಳಿಸಿದೆ. ವಯಸ್ಸು ಮತ್ತು ದೈಹಿಕ ಪರೀಕ್ಷೆಯ ಸಡಿಲಿಕೆಗಳೊಂದಿಗೆ ಕಾನ್ಸ್‌ಟೇಬಲ್ ಹುದ್ದೆಗಳಿಗೆ 10% ಮೀಸಲಾತಿಯನ್ನು ಪಡೆಯುತ್ತಾರೆ ಎಂದು ಮಹಾನಿರ್ದೇಶಕರು ತಿಳಿಸಿದ್ದಾರೆ.

RPF

ರೈಲ್ವೆ ಸಂರಕ್ಷಣಾ ಪಡೆ(ಆರ್‌ಪಿಎಫ್) ಮಾಜಿ ಅಗ್ನಿವೀರ್‌ಗಳಿಗೆ ವಯೋಮಿತಿ ಮತ್ತು ದೈಹಿಕ ಪರೀಕ್ಷೆ ಸಡಿಲಿಕೆಗಳನ್ನು ವಿಸ್ತರಿಸಲಿದೆ ಎಂದು ಗೃಹ ಸಚಿವಾಲಯ ಪ್ರಕಟಿಸಿದೆ. ಈ ನಿರ್ಧಾರವು ಭದ್ರತಾ ಪಡೆಗಳನ್ನು ಬಲಪಡಿಸಲು ಗಮನಾರ್ಹವಾಗಿ ಕೊಡುಗೆ ನೀಡುತ್ತದೆ ಎಂದು ಮಹಾನಿರ್ದೇಶಕರು ಹೇಳಿದ್ದಾರೆ.

SSB

ಸಶಾಸ್ತ್ರ ಸೀಮಾ ಬಲ(SSB) ತನ್ನ ನೇಮಕಾತಿ ನಿಯಮಗಳಲ್ಲಿ ಮಾಜಿ ಅಗ್ನಿವೀರ್‌ಗಳನ್ನು ಸೇರಿಸಲು ಬದಲಾವಣೆಗಳನ್ನು ಪ್ರಕಟಿಸಿದೆ. ಹೊಸ ನೀತಿಯು ವಯಸ್ಸು ಮತ್ತು ದೈಹಿಕ ಸಾಮರ್ಥ್ಯ ಪರೀಕ್ಷೆಯ ಸಡಿಲಿಕೆಗಳನ್ನು ನೀಡುತ್ತದೆ ಎಂದು SSB ನ ಮಹಾನಿರ್ದೇಶಕರು ಹೇಳಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read