ನೈಜೀರಿಯಾ : ಉತ್ತರ-ಮಧ್ಯ ನೈಜೀರಿಯಾದಲ್ಲಿ ಸಮುದಾಯಗಳ ಮೇಲೆ ಮಿಲಿಟರಿ ಗುಂಪುಗಳು ವಾರಾಂತ್ಯದಲ್ಲಿ ನಡೆಸಿದ ದಾಳಿಯಿಂದ ಸಾವನ್ನಪ್ಪಿದವರ ಸಂಖ್ಯೆ 113 ಕ್ಕೆ ಏರಿದೆ ಎಂದು ಸ್ಥಳೀಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪಟ್ಟಣಗಳ ವಸತಿ ಬಡಾವಣೆಗಳನ್ನು ಗುರಿಯಾಗಿಸಿಕೊಂಡು ಸರಣಿ ದಾಳಿ ನಡೆಸಲಾಗಿದ್ದು, ಸಶಸ್ತ್ರ ಗುಂಪುಗಳ ನಡೆಸಿದ ದಾಳಿಯಲ್ಲಿ ಮೃತಪಟ್ಟವರ ಸಂಖ್ಯೆ 113ಕ್ಕೆ ಏರಿಕೆಯಾಗಿದೆ.
ರೈತರು ಮತ್ತು ಕುರಿಗಾಹಿಗಳ ನಡುವೆ ನಿರಂತರ ಘರ್ಷಣೆ ನಡೆಯುತ್ತಿದೆ. ಕಳೆದ ಮೇ ತಿಂಗಳಿನಲ್ಲಿ ನಡೆದ ಹಿಂಸಾಚಾರದಲ್ಲಿ 100ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದರು. ಶನಿವಾರ ಹಾಗೂ ಭಾನುವಾರ ಸಶಸ್ತ್ರ ಗುಂಪುಗಳು ಇಲ್ಲಿನ ಕನಿಷ್ಠ 20 ಸಮುದಾಯಗಳ ಮೇಲೆ ದಾಳಿ ಮಾಡಿದೆ.
ಸ್ಥಳೀಯವಾಗಿ “ದರೋಡೆಕೋರರು” ಎಂದು ಕರೆಯಲ್ಪಡುವ ಗ್ಯಾಂಗ್ಗಳ ದಾಳಿಗಳು ಶನಿವಾರದಿಂದ ಸೋಮವಾರ ಮುಂಜಾನೆಯವರೆಗೆ ಪ್ರಸ್ಥಭೂಮಿ ರಾಜ್ಯದ ಬೊಕ್ಕೋಸ್ ಮತ್ತು ಬಾರ್ಕಿನ್ ಲಾಡಿ ಸ್ಥಳೀಯ ಸರ್ಕಾರಿ ಪ್ರದೇಶಗಳು ಸೇರಿದಂತೆ ಹಲವಾರು ಸಮುದಾಯಗಳಲ್ಲಿ ನಡೆದಿವೆ ಎಂದು ಬೊಕ್ಕೋಸ್ನ ಸ್ಥಳೀಯ ಸರ್ಕಾರದ ಮುಖ್ಯಸ್ಥ ಕಸ್ಸಾ ಸೋಮವಾರ ತಿಳಿಸಿದ್ದಾರೆ. ಶನಿವಾರ ಮತ್ತು ಭಾನುವಾರ ಮಧ್ಯ ನೈಜೀರಿಯಾದಾದ್ಯಂತ ಸುಮಾರು 20 ಸಮುದಾಯದ ಬಡಾವಣೆಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ. ನೈಜೀರಿಯಾದ ಪ್ರಸ್ಥಭೂಮಿ ರಾಜ್ಯದಲ್ಲಿ ಕೃಷಿ ಸಮುದಾಯಗಳು ಮತ್ತು ದನಗಾಹಿಗಳ ನಡುವೆ ಘರ್ಷಣೆಗಳು ಸಾಮಾನ್ಯವಾಗಿದೆ. ಕೃಷಿಯನ್ನು ಅವಲಂಬಿಸಿರುವ ಮುಸ್ಲಿಮರು, ಕ್ರೈಸ್ತರು ಮತ್ತು ಸ್ಥಳೀಯ ಮೂಲನಿವಾಸಿ ಬುಡಕಟ್ಟುಗಳ ನಡುವೆ ಆಗಾಗ ಸಂಘರ್ಷ ನಡೆಯುತ್ತಿರುತ್ತದೆ.