ಬೆಂಗಳೂರು: ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ 152 ಹುದ್ದೆಗಳನ್ನು ನೇರ ನೇಮಕಾತಿ ಭರ್ತಿ ಮಾಡಲಾಗುವುದು ಎಂದು ಅರಣ್ಯ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ.
ಮಾಲಿನ್ಯ ಮಂಡಳಿಗೆ 253 ಹುದ್ದೆಗಳು ಮಂಜೂರಾಗಿದ್ದು, ತಾಂತ್ರಿಕ, ಪ್ರಯೋಗ ಶಾಲೆ ಮತ್ತು ಆಡಳಿತ ವಿಭಾಗಗಳಲ್ಲಿ 152 ಹುದ್ದೆಗಳು ಖಾಲಿ ಇವೆ. ರಾಜ್ಯದಲ್ಲಿ 146 ವೃಂದ ಮತ್ತು ಸ್ಥಳೀಯ ವೃಂದದ 6 ಹುದ್ದೆಗಳು ಸೇರಿದಂತೆ 152 ಹುದ್ದೆಗಳನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ ನೇರ ನೇಮಕಾತಿ ಮಾಡಿಕೊಳ್ಳಲು ಸರ್ಕಾರ ಅನುಮತಿ ನೀಡಿದ ಎಂದು ತಿಳಿಸಿದ್ದಾರೆ.
2010ರಲ್ಲಿ 153 ಖಾಲಿ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಿದ್ದರೂ, ಅನೇಕ ಹುದ್ದೆಗಳು ಭರ್ತಿಯಾಗಿಲ್ಲ. ಈ ಹುದ್ದೆಗಳು ಸೇರಿದಂತೆ ಪ್ರಸ್ತುತ ಮಂಡಳಿಯಲ್ಲಿ ರಾಜ್ಯ ವ್ಯಾಪಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಕ್ರಮ ವಹಿಸಲಾಗಿದೆ. 23 ಬ್ಯಾಕ್ ಲಾಕ್ ಹುದ್ದೆಗಳು ಸೇರಿದಂತೆ 175 ಹುದ್ದೆಗಳನ್ನು ಭರ್ತಿ ಮಾಡಿದಲ್ಲಿ ಶೇಕಡ 69 ರಷ್ಟು ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಿದಂತಾಗುತ್ತದೆ ಎಂದು ಸಚಿವ ಖಂಡ್ರೆ ತಿಳಿಸಿದ್ದಾರೆ.