ಕೇರಳದ ಎರ್ನಾಕುಲಂನಲ್ಲಿ ಸ್ಪೋಟ ಪ್ರಕರಣ : ಸಿಎಂ ಪಿಣರಾಯಿ ವಿಜಯನ್ ಗೆ ಕರೆ ಮಾಡಿ ಮಾಹಿತಿ ಪಡೆದುಕೊಂಡ ಅಮಿತ್ ಶಾ

 

ಕೊಚ್ಚಿ : ಕೇರಳದ ಎರ್ನಾಕುಲಂನ ಕಲಮಸ್ಸೆರಿಯಾ ಕ್ರಿಶ್ಚಿಯನ್ ಗ್ರೂಪ್ ಕನ್ವೆನ್ಷನ್ ಕೇಂದ್ರದಲ್ಲಿ ಸಂಭವಿಸಿದ ಸ್ಪೋಟ ಪ್ರಕರಣ ಸಂಬಂಧ ಗೃಹ ಸಚಿವ ಅಮಿತ್ ಶಾ ಅವರು  ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರೊಂದಿಗೆ ದೂರವಾಣಿ ಮೂಲಕ ರಾಜ್ಯದ ಪರಿಸ್ಥಿತಿಯ ಬಗ್ಗೆ ಮಾಹಿತಿ ಪಡೆದರು.

ಕೊಚ್ಚಿಯ ಕಲಮಸ್ಸೆರಿಯಲ್ಲಿ ಭಾನುವಾರ ನಡೆದ ಸರಣಿ ಬಾಂಬ್ ಸ್ಫೋಟದಲ್ಲಿ ಓರ್ವ ವ್ಯಕ್ತಿ ಮೃತಪಟ್ಟು, ಹಲವರು ಗಾಯಗೊಂಡ ಹಿನ್ನೆಲೆಯಲ್ಲಿ ಕೇರಳಕ್ಕೆ ತಂಡಗಳನ್ನು ರವಾನಿಸಿ ತನಿಖೆ ಆರಂಭಿಸುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಮತ್ತು ರಾಷ್ಟ್ರೀಯ ಭದ್ರತಾ ಪಡೆ (ಎನ್ಎಸ್ಜಿ) ಗೆ ನಿರ್ದೇಶನ ನೀಡಿದ್ದಾರೆ.

ಕೇರಳ ಸಚಿವ ವಿ.ಎನ್.ವಾಸವನ್ ಮಾತನಾಡಿ, “ಮಹಿಳೆಯೊಬ್ಬರು ಬೆಂಕಿಯಿಂದ ಸಾವನ್ನಪ್ಪಿದ್ದಾರೆ,  ಪ್ರಾಥಮಿಕ ವಿಶ್ಲೇಷಣೆಯ ಪ್ರಕಾರ ಎರಡು ಸ್ಫೋಟಗಳು ಸತತವಾಗಿ ನಡೆದಿವೆ… ಒಬ್ಬ ವ್ಯಕ್ತಿ ಆಸ್ಪತ್ರೆಯಲ್ಲಿದ್ದಾರೆ… ಅಪಘಾತದಲ್ಲಿ 36 ಜನರು ಗಾಯಗೊಂಡಿದ್ದು, ಅವರನ್ನು ರಾಜಗಿರಿ ಮತ್ತು ಸನ್ ರೈಸ್ ನ ಆಸ್ಟರ್ ಮೆಡಿಸಿಟಿಗೆ ದಾಖಲಿಸಲಾಗಿದೆ. ಇದೊಂದು ಅಸಾಮಾನ್ಯ ಅಪಘಾತ. ಎಲ್ಲಾ ಏಜೆನ್ಸಿಗಳು ಪ್ರಾಥಮಿಕ ಪರೀಕ್ಷೆಗಾಗಿ ಇಲ್ಲಿವೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read