ನಿನ್ನೆ ಮಳೆಯ ಆತಂಕದ ನಡುವೆಯೂ 10 ಓವರ್ನ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ನಮೀಬಿಯಾ ಎದುರು 41 ರನ್ ಗಳಿಂದ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ಇಂಗ್ಲೆಂಡ್ ಸೂಪರ್ 8ಗೆ ಎಂಟ್ರಿ ಕೊಟ್ಟ 7ನೇ ತಂಡವಾಗಿದೆ. ಕಳೆದ ಏಕದಿನ ವಿಶ್ವ ಕಪ್ ನಲ್ಲಿ ತನ್ನ ಕಳಪೆ ಪ್ರದರ್ಶನದ ಮೂಲಕ ಟೀಕೆಗೆ ಗುರಿಯಾಗಿದ್ದ, ಇಂಗ್ಲೆಂಡ್ ತಂಡ ಟಿ20 ವಿಶ್ವಕಪ್ ನಲ್ಲಿ ಕಮ್ ಬ್ಯಾಕ್ ಮಾಡಿದೆ.
ನಿನ್ನೆಯ ಪಂದ್ಯ ರದ್ದಾಗಿದ್ದರೆ ಸ್ಕಾಟ್ಲ್ಯಾಂಡ್ ತಂಡ ಸೂಪರ್ 8 ತಲುಪಬಹುದಾಗಿತ್ತು. ಇಂದು ಬಲಿಷ್ಠ ಆಸ್ಟ್ರೇಲಿಯಾ ಎದುರು ಸೋಲು ಕಂಡಿರುವ ಸ್ಕಾಟ್ಲ್ಯಾಂಡ್ ತಂಡ ತನ್ನ ಸೂಪರ್ 8 ಕನಸನ್ನು ನುಚ್ಚುನೂರು ಮಾಡಿಕೊಂಡಿದೆ. ಬಾಂಗ್ಲಾದೇಶ ಹಾಗೂ ನೆದರ್ಲ್ಯಾಂಡ್ ಈ ಎರಡು ತಂಡಗಳಲ್ಲಿ ಯಾವ ತಂಡ ಸೂಪರ್ 8 ಅವಕಾಶ ಪಡೆದುಕೊಳ್ಳಲಿದೆ. ಕಾದು ನೋಡಬೇಕಾಗಿದೆ.