ನವದೆಹಲಿ: ಭಾರತೀಯ ಚುನಾವಣಾ ಆಯೋಗವು ಗುರುವಾರ ತನ್ನ ವೆಬ್ ಸೈಟ್ ನಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ(ಎಸ್‌ಬಿಐ) ಪಡೆದ ಚುನಾವಣಾ ಬಾಂಡ್ ಗಳ ಡೇಟಾವನ್ನು ಅಪ್‌ಲೋಡ್ ಮಾಡಿದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಚುನಾವಣಾ ಬಾಂಡ್‌ಗಳಿಗೆ ಸಂಬಂಧಿಸಿದ ಡೇಟಾವನ್ನು ಮಾರ್ಚ್ 12 ರಂದು ಆಯೋಗಕ್ಕೆ ನೀಡಿದೆ ಎಂದು ಚುನಾವಣಾ ನಿಯಂತ್ರಣ ಸಂಸ್ಥೆಯು ಹೇಳಿದೆ.
2018 ರ ಎಲೆಕ್ಟೋರಲ್ ಬಾಂಡ್ ಸ್ಕೀಮ್ ರದ್ದುಗೊಳಿಸುವಾಗ, ಮಾರ್ಚ್ 6 ರೊಳಗೆ ECI ಡೇಟಾವನ್ನು ನೀಡುವಂತೆ ಸುಪ್ರೀಂ ಕೋರ್ಟ್ SBI ಗೆ ನಿರ್ದೇಶನ ನೀಡಿತ್ತು. ಮಾರ್ಚ್ 13 ರೊಳಗೆ ಡೇಟಾವನ್ನು ಪ್ರಕಟಿಸಲು ECI ಗೆ ಸೂಚನೆ ನೀಡಲಾಯಿತು.
ಸುಪ್ರೀಂ ಕೋರ್ಟ್‌ನ ನಿರ್ದೇಶನಗಳನ್ನು ಅನುಸರಿಸಿ, ಎಸ್‌ಬಿಐ ಮಂಗಳವಾರ ಸಂಜೆ ಚುನಾವಣಾ ಆಯೋಗಕ್ಕೆ ಚುನಾವಣಾ ಬಾಂಡ್‌ಗಳ ಖರೀದಿ ಮತ್ತು ವಿಮೋಚನೆಗೆ ಸಂಬಂಧಿಸಿದ ಡೇಟಾವನ್ನು ಹಸ್ತಾಂತರಿಸಿದೆ. ಇಂದು ಚುನಾವಣಾ ಆಯೋಗದಿಂದ ವೆಬ್ ಸೈಟ್ ನಲ್ಲಿ ಚುನಾವಣೆ ಬಾಂಡ್ ಗಳ ಬಗ್ಗೆ ಮಾಹಿತಿ ಪ್ರಕಟಿಸಲಾಗಿದೆ.