ವಯಸ್ಸಾಗುತ್ತಾ ಸಾಗಿದಂತೆ ದಾಂಪತ್ಯವು ಇನ್ನಷ್ಟು ಮಾಗಿ ಪತಿ-ಪತ್ನಿಯರ ನಡುವಿನ ಅನ್ಯೋನ್ಯತೆ ಇನ್ನಷ್ಟು ಹೆಚ್ಚುತ್ತಾ ಸಾಗುತ್ತದೆ ಎಂದು ಕೇಳಿದ್ದೇವೆ.
ಅದರಂತೆಯೇ ಹಿರಿಯ ಜೀವಗಳ ನಡುವಿನ ಸಾಮರಸ್ಯ ತೋರುವ ಅನೇಕ ವಿಡಿಯೋಗಳು ನೆಟ್ಟಿಗರ ಮನ ಗೆಲ್ಲುತ್ತಲೇ ಇವೆ.
ಇಂಥದ್ದೇ ವಿಡಿಯೋವೊಂದರಲ್ಲಿ, ಕೋಲ್ಕತ್ತಾದ ಮೂವಿ ಥಿಯೇಟರ್ ಒಂದರಲ್ಲಿ ಹಿರಿಯ ವ್ಯಕ್ತಿಯೊಬ್ಬರು ತಮ್ಮ ಮಡದಿಯನ್ನು ಮೆಟ್ಟಿಲುಗಳನ್ನು ಇಳಿದು ಸಾಗಲು ಕೈಹಿಡಿದು ನೆರವಾಗುತ್ತಿರುವುದನ್ನು ನೋಡಿ ನೆಟ್ಟಿಗರು ಭಾರೀ ಖುಷಿಯಾಗಿದ್ದಾರೆ.
“ಸ್ನೇಹಿತರೊಂದಿಗೆ ಮೂವಿ ಡೇಟ್ ಮೇಲೆ ಹೋಗಿದ್ದ ವೇಳೆ ಈ ಮುದ್ದಾದ ಕ್ಷಣಗಳಿಗೆ ಸಾಕ್ಷಿಯಾದೆ. ಪ್ರತಿಯೊಬ್ಬರ ಪ್ರೀತಿಯೂ ಹೀಗೆಯೇ ಉಳಿಯಲಿ,” ಎಂದು ಕ್ಯಾಪ್ಷನ್ ಕೊಟ್ಟು, ಅನ್ವೇಶಾ ಘೋಷ್ ಹೆಸರಿನ ನೆಟ್ಟಿಗರೊಬ್ಬರು ಇನ್‌ಸ್ಟಾಗ್ರಾಂನಲ್ಲಿ ಈ ವಿಡಿಯೋ ಹಂಚಿಕೊಂಡಿದ್ದಾರೆ.