
ಉತ್ತರಾಖಂಡ್‌ನ ನೈನಿತಾಲ್‌ನಲ್ಲಿ ವಾಹನ ಕಮರಿಗೆ ಉರುಳಿ ಎಂಟು ಮಂದಿ ಸಾವನ್ನಪ್ಪಿದ್ದು, ಮೂವರು ಗಾಯಗೊಂಡಿದ್ದಾರೆ.
ಸೋಮವಾರ ರಾತ್ರಿ ಉತ್ತರಾಖಂಡ್‌ನ ನೈನಿತಾಲ್ ಜಿಲ್ಲೆಯಲ್ಲಿ ವಾಹನವು ಕಮರಿಗೆ ಉರುಳಿದ ಪರಿಣಾಮ ಕನಿಷ್ಠ ಎಂಟು ಜನರು ಸಾವನ್ನಪ್ಪಿದ್ದಾರೆ ಮತ್ತು ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಪೊಲೀಸರ ಪ್ರಕಾರ, ನೈನಿತಾಲ್‌ನ ಬೇಟಾಲ್‌ಘಾಟ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ.
ಮೃತರನ್ನು ವಿಶ್ರಮ್ ಚೌಧರಿ(50), ಧೀರಜ್(45), ಅನಂತರಾಮ್ ಚೌಧರಿ(40), ವಿನೋದ್ ಚೌಧರಿ(38), ಉದಯರಾಮ್ ಚೌಧರಿ(55), ತಿಲಕ್ ಚೌಧರಿ(45) ಗೋಪಾಲ್ ಬಸ್ನಿಯಾತ್(60) ಮತ್ತು ರಾಜೇಂದ್ರ ಕುಮಾರ್ ಎಂದು ಗುರುತಿಸಲಾಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.