ಎಂಎಲ್ ಎ ಟಿಕೆಟ್ ಕೊಡಿಸುವುದಾಗಿ ಉದ್ಯಮಿ ಗೋವಿಂದಬಾಬು ಪೂಜಾರಿಗೆ 5 ಕೋಟಿ ವಂಚಿಸಿದ ಪ್ರಕರಣದಲ್ಲಿ ಬಂಧನಕ್ಕೀಡಾಗಿರುವ ಹಿಂದೂ ಹೋರಾಟಗಾರ್ತಿ ಚೈತ್ರಾ ಕುಂದಾಪುರ ಮೂರ್ಛೆ ರೋಗದಿಂದ ಬಳಲುತ್ತಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಇದೀಗ ಎಲ್ಲವೂ ಹೈಡ್ರಾಮಾ ಎಂಬುದು ಗೊತ್ತಾಗಿದೆ.
ಚೈತ್ರಾಗೆ ಇಸಿಜಿ, ಬಿಪಿ, ಶುಗರ್ ಎಲ್ಲವೂ ನಾರ್ಮಲ್ ಆಗಿದೆ. ಫಿಟ್ಸ್ ಬಂದಂತೆ ‘ಚೈತ್ರಾ’ ಹೈಡ್ರಾಮಾ ಸೃಷ್ಟಿಸಿದ್ದರು ಎಂಬುದು ತಿಳಿದು ಬಂದಿದೆ. ಸಿಸಿಬಿ ಪೊಲೀಸರ ವಿಚಾರಣೆ ವೇಳೆ ಧಿಡೀರ್ ಅಸ್ವಸ್ಥಳಾಗಿ ಕುಸಿದು ಬಿದ್ದು ಆಸ್ಪತ್ರೆಗೆ ದಾಖಲಾಗಿದ್ದು, ಸೋಪ್ ನೊರೆಯಿಂದಲೇ ಚೈತ್ರಾ ಡ್ರಾಮಾ ಮಾಡಿದ್ಲಾ ಎಂಬ ಅನುಮಾನ ವ್ಯಕ್ತವಾಗಿದೆ.
ಮಹಿಳಾ ಸಾಂತ್ವನ ಕೇಂದ್ರದಲ್ಲಿದ್ದ ಚೈತ್ರಾ ರಾತ್ರಿ ಊಟ ಮಾಡಿ ಮಲಗಿದ್ದರು. ಶುಕ್ರವಾರ ಬೆಳಗ್ಗೆ ಎದ್ದು ಒಂದು ಗಂಟೆ ಯೋಗ ಹಾಗೂ ಧ್ಯಾನ ಮಾಡಿದ್ದರು. ಆಕೆಯನ್ನು ಸಿಸಿಬಿ ಕಚೇರಿಗೆ ಕರೆ ತರುತ್ತಿದ್ದಂತೆ ಅಸ್ವಸ್ಥಳಾಗಿ ಬಾಯಿಯಿಂದ ನೊರೆ ಕಕ್ಕಿಕೊಂಡು ಕುಸಿದು ಬಿದ್ದಿದ್ದಳು. ಕೂಡಲೇ ಸಿಸಿಬಿ ಪೊಲೀಸರು ಈಕೆಯನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಿದ್ದರು. ಚೈತ್ರಾಳನ್ನು ಪರೀಕ್ಷೆ ಮಾಡಿದ ವೈದ್ಯರು ಆಕೆಗೆ ಬಿಪಿ, ಶುಗರ್ ಏನೂ ಇಲ್ಲ ಎಲ್ಲವೂ ಕೂಡ ನಾರ್ಮಲ್ ಆಗಿದೆ ಎಂದಿದ್ದಾರೆ. ಮೂರ್ಚೆ ರೋಗದಿಂದ ಆಕೆ ಕುಸಿದು ಬಿದ್ದಿಲ್ಲ, ಅಕೆ ಆರೋಗ್ಯ ಸ್ಥಿರವಾಗಿದೆ ಎಂದು ವಿಕ್ಟೋರಿಯಾ ಆಸ್ಪತ್ರೆ ವೈದ್ಯರು ಹೇಳಿದ್ದಾರೆ. ಇದರಿಂದ ಚೈತ್ರಾ ದೊಡ್ಡ ಹೈ ಡ್ರಾಮಾ ಸೃಷ್ಟಿಸಿದ್ದಳು ಎಂಬುದು ಬಯಲಾಗಿದೆ. ಅಲ್ಲದೇ ಈ ಹಿಂದೆ ಆಕೆಗೆ ಮೂರ್ಚೆ ರೋಗ ಇದ್ದ ಯಾವುದೇ ಖಚಿತ ಮಾಹಿತಿ ಲಭ್ಯವಾಗಿಲ್ಲ.