ನಿಮಗೆ ಸಿಹಿ ತಿಂಡಿಗಳು ಎಂದರೆ ಬಹಳ ಇಷ್ಟವೇ. ನಿಮ್ಮ ಮನೆಯಲ್ಲಿ ಸದಾ ಒಂದಿಲ್ಲೊಂದು ಸಿಹಿತಿಂಡಿಗಳು ಇದ್ದೇ ಇರುತ್ತವೆಯೇ. ವಿಪರೀತ ಸಿಹಿ ಸೇವನೆಯಿಂದ ಡಯಾಬಿಟಿಸ್ ಅಲ್ಲದೆ ಮತ್ತೂ ಹತ್ತು ಹಲವು ಸಮಸ್ಯೆಗಳು ಕಾಡಬಹುದು ಎಂಬುದು ನಿಮಗೆ ತಿಳಿದಿದೆಯೇ…?
ಹೆಚ್ಚು ಸಿಹಿ ತಿನ್ನುತ್ತಾ ಹೋದಂತೆ ನೆನಪಿನ ಶಕ್ತಿ ಕುಗ್ಗುತ್ತದೆ. ಶಾಲಾ ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು ಹೆಚ್ಚು ಸಿಹಿ ತಿಂದರೆ ಓದಿನಲ್ಲಿ ಆಸಕ್ತಿ ಕಳೆದುಕೊಳ್ಳುವ ಸಂಭವವೇ ಹೆಚ್ಚು. ಹಾಗಾಗಿ ನೈಸರ್ಗಿಕ ಆಹಾರಗಳಿಗೆ ಹೆಚ್ಚಿನ ಒತ್ತು ಕೊಡಿ.
ಸಿಹಿ ತಿಂಡಿಗಳ ರೀತಿಯಲ್ಲೇ ಕರಿದ ತಿಂಡಿಗಳಿಂದಲೂ ಹೆಚ್ಚಿನ ಕೊಬ್ಬಿನ ಅಂಶ ನಿಮ್ಮ ದೇಹಕ್ಕೆ ಸೇರುತ್ತವೆ. ಇದು ಮೆದುಳಿನ ನರಮಂಡಲವನ್ನು ಸಮಸ್ಯೆಗೆ ದೂಡುತ್ತದೆ. ಅಲ್ಜೀಮರ್ಸ್ ಕಾಯಿಲೆಗೂ ಇದು ಕಾರಣವಾಗಬಹುದು.
ಬ್ರೆಡ್, ಪೇಸ್ಟ್ರಿ ಹಾಗೂ ಪಿಜ್ಜಾಗಳ ವಿಪರೀತ ಸೇವನೆಯೂ ಮೆದುಳಿನ ಆರೋಗ್ಯವನ್ನು ಹಾಳು ಮಾಡುತ್ತದೆ. ಇದರಿಂದ ಮಧುಮೇಹದಲ್ಲೂ ಏರುಪೇರಾಗಬಹುದು. ಮೆದುಳು ತನ್ನ ನಿತ್ಯದ ಚಟುವಟಿಕೆಗಳನ್ನು ನಡೆಸಲೂ ಸಾಧ್ಯವಾಗದಿರಬಹುದು.