ನುಗ್ಗೇಕಾಯಿಯ ವಾಸನೆ ಚೆನ್ನಾಗಿಲ್ಲ ಎಂದು ಅದನ್ನು ದೂರವಿಡದಿರಿ. ವಾರಕ್ಕೊಮ್ಮೆ ಅಥವಾ ಎರಡು ಬಾರಿ ಅಡುಗೆಯಲ್ಲಿ ಬಳಸಿ ಮತ್ತು ಅದರ ಅನಂತ ಪ್ರಯೋಜನಗಳನ್ನು ನಿಮ್ಮದಾಗಿಸಿಕೊಳ್ಳಿ.
ನುಗ್ಗೆಕಾಯಿ ಸೊಪ್ಪಿನಲ್ಲಿ ಆಂಟಿ ಆಕ್ಸಿಡೆಂಟ್, ಆಂಟಿ ಫಂಗಲ್ ಮತ್ತು ಆಂಟಿ ಬ್ಯಾಕ್ಟೀರಿಯಲ್ ಗುಣಗಳಿವೆ. ನುಗ್ಗೆಕಾಯಿ ಬೀಜದ ಎಣ್ಣೆಯನ್ನು ತ್ವಚೆಗೆ ಹಚ್ಚಿಕೊಂಡರೆ ಧೂಳು ಕೊಳೆಯಿಂದ ರಕ್ಷಣೆ ಸಿಗುತ್ತದೆ. ಸನ್ ಬರ್ನ್ ನಿಂದ ಮುಕ್ತಿ ದೊರೆಯುತ್ತದೆ. ವಿಟಮಿನ್ ಎ ಮತ್ತು ಕಬ್ಬಿಣಾಂಶ ಹೇರಳವಾಗಿದ್ದು ಮುಖದ ಕಲೆ ದೂರವಾಗುತ್ತದೆ.
ಇದರ ಎಣ್ಣೆಯಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ರಕ್ತದೊತ್ತಡ ನಿಯಂತ್ರಣಕ್ಕೆ ಇದರ ಸೊಪ್ಪನ್ನು ವಾರಕ್ಕೆ ಮೂರು ಬಾರಿಯಂತೆ ಸೇವಿಸಬಹುದು. ನಾರಿನಂಶ ಹೇರಳವಾಗಿರುವ ನುಗ್ಗೆಕಾಯಿ ಸೇವನೆಯಿಂದ ಮಲಬದ್ಧತೆ ಸಮಸ್ಯೆ ಕಾಡುವುದಿಲ್ಲ.
ರಕ್ತ ಹೀನತೆ ಸಮಸ್ಯೆ ಇರುವವರು ನಿತ್ಯ ನುಗ್ಗೆ ಚಿಗುರಿನ ಪಲ್ಯ ಇಲ್ಲವೇ ರೊಟ್ಟಿ ಮಾಡಿ ಸೇವಿಸಿದರೆ ವಾರದೊಳಗೆ ನಿಮ್ಮ ಹಿಮೋಗ್ಲೋಬಿನ್ ಪ್ರಮಾಣ ಏರುತ್ತದೆ. ಹಲವು ಪ್ರಯೋಜನಗಳನ್ನು ಹೊಂದಿರುವ ನುಗ್ಗೆಸೊಪ್ಪು ಹಾಗೂ ಕಾಯಿಯನ್ನು ನಿಮ್ಮ ಅಡುಗೆ ಮನೆಯಿಂದ ದೂರವಿಡುವ ತಪ್ಪು ಮಾಡದಿರಿ.