ಕುತ್ತಿಗೆ ಸುತ್ತಲೂ ಕಪ್ಪುಕಲೆಗಳು ಮೂಡುತ್ತವೆ. ಇದಕ್ಕೆ ಕಾರಣ ನಾವು ಧರಿಸುವ ಆಭರಣ ಒಂದು ಕಾರಣವಾಗಿದ್ದರೆ, ಇನ್ನೊಂದು ನಮ್ಮ ದೇಹದಲ್ಲಿನ ಇನ್ಸುಲಿನ್, ಥೈರಾಯ್ಡ್ , ಅಧಿಕ ಕೊಲೆಸ್ಟ್ರಾಲ್, ಪಿಸಿಓಎಸ್ ಕಾರಣವಾಗಿದೆ. ಹಾಗಾಗಿ ಇದಕ್ಕೆ ಮನೆಮದ್ದನ್ನು ಹಚ್ಚುವುದರ ಜೊತೆಗೆ ನಿಮ್ಮ ಆಹಾರದಲ್ಲಿ ಇವುಗಳನ್ನು ಸೇವಿಸಬೇಕು.
ಸಕ್ಕರೆ ಪಾನೀಯಗಳಿಂದ, ಮೈದಾ, ಚಾಕೋಲೇಟ್, ಕೇಕ್, ಬಿಸ್ಕತ್ತು ಮುಂತಾದ ಸಂಸ್ಕರಿಸಿದ ಆಹಾರದಿಂದ ದೂರವಿರಿ. ತಾಜಾ ಹಣ್ಣಿನ ರಸವನ್ನು, ಬೀಜಗಳನ್ನು, ತರಕಾರಿಯನ್ನು ಸೇವಿಸಿ. ಹೆಚ್ಚು ನೀರು ಕುಡಿಯಿರಿ. ರಾಗಿ, ಓಟ್ಸ್ , ಚಿಯಾ ಬೀಜ, ವಾಲ್ ನಟ್ಸ್ ಮತ್ತು ಒಮೆಗಾ 3 ಸೇವಿಸಿ. ಗಿಡಮೂಲಿಕೆ ಚಹಾ, ಜೇನುತುಪ್ಪವನ್ನು ಸೇವಿಸಿ.
ಕಚ್ಚಾ ಆಲೂಗಡ್ಡೆ ರಸವನ್ನು ನಿಮ್ಮ ಗಂಟಲು ಮತ್ತು ಕೈಕಾಲುಗಳಿಗೆ ಹಚ್ಚಿ 30 ನಿಮಿಷ ಬಿಟ್ಟು ತೊಳೆಯಿರಿ. 45 ನಿಮಿಷಗಳ ಕಾಲ ವ್ಯಾಯಾಮ ಮಾಡಿ. ಊಟ ಮಾಡಿದ ಬಳಿಕ 15 ಗಂಟೆಗಳ ಕಾಲ ಯಾವುದೇ ಕ್ಯಾಲೋರಿಗಳನ್ನು ತೆಗೆದುಕೊಳ್ಳಬೇಡಿ.