ಈರುಳ್ಳಿ ಆರೋಗ್ಯಕ್ಕೆ ಒಳ್ಳೆಯದು. ಬೇಸಿಗೆಯ ಬಿಸಿಲನ್ನು ತಡೆಯಲು ಈರುಳ್ಳಿ ಸೇವನೆ ಮಾಡುವಂತೆ ಸಲಹೆ ನೀಡಲಾಗುತ್ತದೆ. ಸಲಾಡ್ ನಲ್ಲಿ ಈರುಳ್ಳಿ ಇಲ್ಲವೆಂದ್ರೆ ರುಚಿ ಇರುವುದಿಲ್ಲ. ಬರೀ ಈರುಳ್ಳಿ ಸೇವಿಸುವ ಬದಲು ಅದಕ್ಕೆ ವಿನೆಗರ್ ಸೇರಿಸಿ ತಿಂದಲ್ಲಿ ಅದು ಆರೋಗ್ಯಕ್ಕೆ ಒಳ್ಳೆಯದು. ಇದನ್ನು ಸೇವಿಸುವುದರಿಂದ ಮಲಬದ್ಧತೆ ಕಡಿಮೆಯಾಗುತ್ತದೆ. ಇದನ್ನು ಮನೆಯಲ್ಲಿ ತಯಾರಿಸುವುದು ಸುಲಭ.
ಮೊದಲು ಸಣ್ಣ ಈರುಳ್ಳಿ ತೆಗೆದುಕೊಳ್ಳಿ. ಅದನ್ನು ನಾಲ್ಕು ಭಾಗವಾಗಿ ಕತ್ತರಿಸಿ. ಅರ್ಧ ಬೌಲ್ ಬಿಳಿ ವಿನೆಗರ್ ಅಥವಾ 1 ಚಮಚ ಆಪಲ್ ಸೈಡರ್ ವಿನೆಗರ್, ನೀರನ್ನು ಹಾಕಿ, ಹಸಿರು ಅಥವಾ ಕೆಂಪು ಮೆಣಸಿನಕಾಯಿ ಪುಡಿ ಸೇರಿಸಿ. ರುಚಿಗೆ ತಕ್ಕಂತೆ ಉಪ್ಪು ಸೇರಿಸಿ. ಈರುಳ್ಳಿ ಸರಿಯಾಗಿ ಮಿಕ್ಸ್ ಮಾಡಿ ಗಾಜಿನ ಜಾರಿನಲ್ಲಿ 3 ರಿಂದ 4 ದಿನಗಳವರೆಗೆ ಕೋಣೆಯ ಉಷ್ಣಾಂಶದಲ್ಲಿ ಇರಿಸಿ. 4 ದಿನಗಳ ನಂತರ ಅದನ್ನು ಫ್ರಿಜ್ ನಲ್ಲಿಡಿ. ಈರುಳ್ಳಿ ಕೆಂಪು ಬಣ್ಣಕ್ಕೆ ಬಂದ ನಂತ್ರ ಸೇವಿಸಿ.
ವಿನೆಗರ್ ನೊಂದಿಗೆ ಈರುಳ್ಳಿ ತಿನ್ನುವುದ್ರಿಂದ ಕೂದಲು ಉದುರುವ ಸಮಸ್ಯೆ ಕಡಿಮೆಯಾಗುತ್ತದೆ. ಮೆದುಳು ವೇಗವಾಗಿ ಕೆಲಸ ಮಾಡುತ್ತದೆ. ಮೂತ್ರದ ಸೋಂಕಿನಿಂದ ಬಳಲುತ್ತಿರುವ ಜನರು ಈರುಳ್ಳಿ ಸೇವಿಸಬಹುದು. ವೀರ್ಯಾಣುಗಳ ಸಂಖ್ಯೆ ಹೆಚ್ಚಾಗುತ್ತದೆ. ಮುಟ್ಟಿನ ಸಮಸ್ಯೆಗೂ ಇದು ಪ್ರಯೋಜನಕಾರಿ. ತೂಕವನ್ನು ಕಡಿಮೆ ಮಾಡಲು, ಉತ್ತಮ ನಿದ್ರೆಗೆ ಮತ್ತು ರಕ್ತದೊತ್ತಡ ನಿಯಂತ್ರಣಕ್ಕೆ ಸಹಕಾರಿ.