2 ಕಪ್ (400 ಎಂಎಲ್) ನೀರನ್ನು ಕುದಿಸಿ. ಅದರಲ್ಲಿ 150 ಗ್ರಾಂ ಒಣದ್ರಾಕ್ಷಿಯನ್ನು ನೆನೆಹಾಕಿ. ರಾತ್ರಿ ಪೂರ್ತಿ ದ್ರಾಕ್ಷಿ ನೀರಿನಲ್ಲೇ ಇರಲಿ. ಮುಂಜಾನೆ ದ್ರಾಕ್ಷಿ ಹಾಕಿಟ್ಟ ನೀರನ್ನು ಸೋಸಿದ ಬಳಿಕ ಸ್ವಲ್ಪ ಬಿಸಿ ಮಾಡಿ ಕುಡಿಯಿರಿ. ಈ ನೀರನ್ನು ಕುಡಿದ ನಂತರ ಅರ್ಧ ಗಂಟೆ ಏನನ್ನೂ ಸೇವಿಸಬೇಡಿ.
ತಿಂಗಳಲ್ಲಿ 4 ದಿನ ಹೀಗೆ ದ್ರಾಕ್ಷಿಯ ನೀರನ್ನು ಕುಡಿಯುವುದರಿಂದ ಲಿವರ್ ನ ತೊಂದರೆಗಳು ದೂರವಾಗುತ್ತವೆ. ಇದರಿಂದ ರಕ್ತ ಶುದ್ಧಿಯಾಗಿ ಜೀರ್ಣಕ್ರಿಯೆ ಸರಾಗವಾಗಿ ನಡೆಯುತ್ತದೆ. ದ್ರಾಕ್ಷಿಯಲ್ಲಿ ಹೆಚ್ಚಿನ ಪ್ರಮಾಣದ ವಿಟಮಿನ್ ಮತ್ತು ಮಿನರಲ್ ಇರುವುದರಿಂದ ಇದು ಆರೋಗ್ಯಕರವಾಗಿದೆ.
ಒಣದ್ರಾಕ್ಷಿಯನ್ನು ನೀರಲ್ಲಿ ನೆನೆಸುವುದರಿಂದ ಅದರಲ್ಲಿನ ಸಕ್ಕರೆಯ ಪ್ರಮಾಣ ಕಡಿಮೆಯಾಗುತ್ತದೆ. ಹಾಗಾಗಿ ಇದು ಲಿವರ್ ಗೆ ಒಳ್ಳೆಯ ಔಷಧವಾಗಿದೆ. ಹೆಚ್ಚಿನ ಹೊಳಪನ್ನು ಹೊಂದಿರುವ ದ್ರಾಕ್ಷಿಯನ್ನು ಆಯ್ಕೆ ಮಾಡಬೇಡಿ. ಏಕೆಂದರೆ ಅಂತಹ ದ್ರಾಕ್ಷಿ ಕೆಮಿಕಲ್ ನಿಂದ ಕೂಡಿರುತ್ತದೆ.