ವಿಮಾನದಲ್ಲಿ ಮಹಿಳೆಯೊಂದಿಗೆ ಅನುಚಿತ ವರ್ತನೆ;‌ ಪಾನಮತ್ತ ಪ್ರಯಾಣಿಕ ಅರೆಸ್ಟ್

ವಿಮಾನದೊಳಗೆ ನಡೆಯುವ ಅಪರಾಧ ಪ್ರಕರಣದಲ್ಲಿ ಹೆಚ್ಚಳ ಕಂಡುಬಂದಿದೆ. ಇತ್ತೀಚೆಗಷ್ಟೇ ವಾಷಿಂಗ್ಟನ್‌ನ ಸಿಯಾಟಲ್‌ನಿಂದ ಅಲಾಸ್ಕಾದ ಆಂಕಾರೇಜ್‌ಗೆ ತೆರಳುತ್ತಿದ್ದ ವಿಮಾನದಲ್ಲಿ ಇಂತಹದೊಂದು ಘಟನೆ ನಡೆದಿದೆ.

ಆಡಮ್ ಡೇವಿಡ್ ಸೆಮೌರ್ ಎಂಬ ವ್ಯಕ್ತಿ ಮಹಿಳಾ ಪ್ರಯಾಣಿಕರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ.

ಮೊದಲಿಗೆ ಆತ ಸ್ನೇಹಪರವಾಗಿ ಕಾಣಿಸಿಕೊಂಡಿದ್ದನಂತೆ. ಆದರೆ, ಅವನು ಮೂರು ಮದ್ಯದ ಬಾಟಲಿಗಳನ್ನು ಹೊರತೆಗೆದು ಎಲ್ಲವನ್ನೂ ಕುಡಿದ ಬಳಿಕ ಅವನ ನಡವಳಿಕೆಯು ಬದಲಾಯಿತು.

ವಿಪರೀತ ಆಲ್ಕೋಹಾಲ್ ಸೇವಿಸಿದ ನಂತರ ಆಡಮ್, ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾನೆ. ಮಹಿಳೆಯ ಒಪ್ಪಿಗೆಯಿಲ್ಲದೆ ಆಕೆಯ ದೇಹವನ್ನು ಸ್ಪರ್ಶಿಸಿದ್ದಾನೆ. ಆಕೆಯ ಭುಜದ ಮೇಲೆ ತಲೆಯಿಟ್ಟು ಮಲಗಿದ್ದಾನೆ. ಅಲ್ಲದೆ ತನ್ನನ್ನು ಪ್ರೀತಿಸುವಂತೆ ಕೋರಿಕೊಂಡಿದ್ದಾನೆ. ಆದರೆ, ಆತನ ನಡವಳಿಕೆಯಿಂದ ಭೀತಿಗೊಂಡ ಮಹಿಳೆ ಆಡಂ ಮಾತನ್ನು ನಿರ್ಲಕ್ಷಿಸಿದ್ದಾಳೆ.

ವಿಮಾನ ಅಪಘಾತವಾಗುತ್ತೆ ಎಂದು ಕುಡುಕ ಆಡಂ ಹೇಳಿದಾಗ ಮಹಿಳೆ ಫ್ಲೈಟ್ ಅಟೆಂಡೆಂಟ್‌ನ ಗಮನವನ್ನು ಸೆಳೆಯಲು ಪ್ರಯತ್ನಿಸಿದ್ದಾಳೆ. ವಿಮಾನದೊಳಗೆ ಗಲಾಟೆ ಸೃಷ್ಟಿಸಿದ ಆಡಂ, ಬಾತ್ರೂಮ್ ನಲ್ಲಿ ಸಿಗರೇಟ್ ಸಹ ಹೊತ್ತಿಸಿದ್ದಾನೆ. ವಿಮಾನ ನಿಲ್ದಾಣಕ್ಕೆ ಆಗಮಿಸಿದ ತಕ್ಷಣ ಆಡಮ್ ನನ್ನು ವಿಮಾನ ನಿಲ್ದಾಣದ ಪೊಲೀಸರು ಬಂಧಿಸಿದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read