ಕುಡಿದ ಮತ್ತಲ್ಲಿ 105 ರೂಪಾಯಿಗೆ ಧಾನ್ಯ ಸಂಗ್ರಹಿಸುವ ಗೋಡೌನ್ ಖರೀದಿಸಿದ ವ್ಯಕ್ತಿಯೊಬ್ಬ ನಂತರ ಅದಕ್ಕೆ 4.22 ಲಕ್ಷ ರೂ. ಖರ್ಚು ಮಾಡಿ ತಮ್ಮ ಕನಸಿನ ಮನೆಯನ್ನಾಗಿ ಪರಿವರ್ತಿಸಿದ್ದಾರೆ. ಇಂಗ್ಲೆಂಡ್ ನ ಡರ್ಬಿಶೈರ್ ನಲ್ಲಿರುವ ಬಾಬ್ ಕ್ಯಾಂಪ್‌ಬೆಲ್ ಮತ್ತು ಅವರ ಪತ್ನಿ ಕರೋಲ್ ಆನ್ ಆನ್‌ಲೈನ್‌ನಲ್ಲಿ 105 ರೂ. ಗೆ ಮನೆ ಖರೀದಿಸಿದ್ದರು.
ಬಿಯರ್ ಕುಡಿದ ನಂತರ eBay ಮೂಲಕ ಬಾಬ್ ಕ್ಯಾಂಪ್ ವೆಲ್ ಮನೆಯೊಂದನ್ನ ಗುರ್ತಿಸಿದ್ದಾರೆ. ಬಳಿಕ ಅದನ್ನು ಮನೆಯನ್ನಾಗಿ ಅಭಿವೃದ್ಧಿಪಡಿಸಲು £ 4,000 (ರೂ. 4.22 ಲಕ್ಷ) ಖರ್ಚು ಮಾಡಿದರು. ದಂಪತಿ ಆರು ವರ್ಷಗಳಿಂದ ಪುಟ್ಟ ಮನೆಯಲ್ಲಿ ಇದ್ದಾರೆ. ಮನೆ ಸುಮಾರು ನಾಲ್ಕು ಮೀಟರ್ ಎತ್ತರ ಮತ್ತು ನಾಲ್ಕು ಮೀಟರ್ ಅದ್ದ- ಅಗಲ ಹೊಂದಿದೆ.
ಚಿಕ್ಕ ಮನೆಯಲ್ಲಿ ಅಗ್ಗಿಸ್ಟಿಕೆ ಇದೆ. ಡೈನಿಂಗ್ ಟೇಬಲ್ ಇದೆ. ಹಳೆಯ ಮರದ ಪಟ್ಟಿಗಳನ್ನು ಗೋಡೆಗಳಿಗೆ ಇಟ್ಟಿಗೆಗಳನ್ನಾಗಿ ಪರಿವರ್ತಿಸಲಾಗಿದೆ.
ಅಡುಗೆಮನೆಯು ಸುಸಜ್ಜಿತವಾಗಿದೆ. ಏಣಿಯ ಮೂಲಕ ಮಹಡಿ ಪ್ರವೇಶಿಸಬಹುದಾದ ಮಲಗುವ ಸ್ಥಳವಿದೆ. ಸ್ನಾನಗೃಹವನ್ನು ಬಾಗಿಲಿನ ಹಿಂದೆ ಮರೆಮಾಡಲಾಗಿದೆ. ಅಲ್ಲಿ ಶವರ್, ಶೌಚಾಲಯ, ಸಿಂಕ್ ಮತ್ತು ಕನ್ನಡಿಯೂ ಇದೆ.