ಚಿಕ್ಕಮಗಳೂರಿನ ಪ್ರಸಿದ್ದ ‘ಬಿಂಡಿಗ ದೇವಿರಮ್ಮ’ ದೇವಸ್ಥಾನದಲ್ಲಿ ‘ವಸ್ತ್ರ ಸಂಹಿತೆ’ ಜಾರಿ

ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರಿನ ಪ್ರಸಿದ್ಧ ಬಿಂಡಿಗ ದೇವಿರಮ್ಮನ ದೇವಸ್ಥಾನದಲ್ಲಿ ಭಕ್ತರಿಗೆ ವಸ್ತ್ರ ಸಂಹಿತೆ ಜಾರಿ ಮಾಡಲಾಗಿದೆ.

ಚಿಕ್ಕಮಗಳೂರಿನ ಮಲ್ಲೇನಹಳ್ಳಿಯಲ್ಲಿರುವ ದೇವಸ್ಥಾನ ಇದಾಗಿದ್ದು, ಬಿಂಡಿಗ ದೇವೀರಮ್ಮ ದೇವಾಲಯಕ್ಕೆ ಬರುವ ಭಕ್ತರು ಸಾಂಪ್ರದಾಯಿಕ ಉಡುಗೆ ಮಾತ್ರ ಧರಿಸಿ ಬರಬೇಕು ಎಂದು ದೇವಾಲಯದ ಆಡಳಿತ ಮಂಡಳಿ ಸೂಚಿಸಿದೆ.

ಸಾಂಪ್ರದಾಯಿಕ ಉಡುಗೆ ಧರಿಸದೇ ದೇವಾಲಯಕ್ಕೆ ಬರುವವರಿಗೆ ದೇವಾಲಯದ ಒಳಗೆ ಪ್ರವೇಶ ನಿಷೇಧಿಸಲಾಗಿದೆ ಎಂದು ತಿಳಿಸಿದೆ.ಚಂದ್ರದ್ರೋಣ ಪರ್ವತ ಶ್ರೇಣಿಗೆ ಹೊಂದಿಕೊಂಡಿರುವ 3 ಸಾವಿರ ಅಡಿ ಎತ್ತರದ ಬೆಟ್ಟದಲ್ಲಿ ಬಿಂಡಿಗ ದೇವಿರಮ್ಮ ದೇವಾಲಯವಿದ್ದು, ದೀಪಾವಳಿ ದಿನ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಪ್ಯಾಂಟ್, ಟೀ ಶರ್ಟ್, ಜೀನ್ಸ್ ಧರಿಸಿ ಬರುವುದರಿಂದ ದೇವಸ್ಥಾನದಲ್ಲಿ ಭಕ್ತಿಯ ವಾತಾವರಣಕ್ಕೆ ಧಕ್ಕೆಯಾಗುತ್ತಿದೆ. ವಸ್ತ್ರ ಸಂಹಿತೆ ಜಾರಿ ಮಾಡುವಂತೆ ಕೆಲ ಹಿಂದೂಪರ ಸಂಘಟನೆಗಳು ಈ ಹಿಂದಿನಿಂದಲು ಒತ್ತಾಯಿಸಿದ್ದವು. ಈ ಹಿನ್ನೆಲೆಯಲ್ಲಿ ಇದೀಗ ವಸ್ತ್ರ ಸಂಹಿತೆ ಜಾರಿ ಮಾಡಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read