ಬೆಂಗಳೂರು: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಕರ್ನಾಟಕ ರತ್ನ ಡಾ. ಪುನೀತ್ ರಾಜಕುಮಾರ್ ಹೃದಯ ಜ್ಯೋತಿ ಯೋಜನೆ ಉದ್ಘಾಟನೆ ಕಾರ್ಯಕ್ರಮ ಮಾರ್ಚ್ 15ರಂದು ಬೆಳಿಗ್ಗೆ 11 ಗಂಟೆಗೆ ಧಾರವಾಡ ಎಸ್.ಡಿ.ಎಂ. ಕಾಲೇಜು ಡಿ. ವೀರೇಂದ್ರ ಹೆಗಡೆ ಕಲಾಕ್ಷೇತ್ರದಲ್ಲಿ ನಡೆಯಲಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಉದ್ಘಾಟನೆ ನೆರವೇರಿಸಲಿದ್ದು. ಕಾರ್ಮಿಕ ಸಚಿವ ಸಂತೋಷ್ ಲಾಡ್ ಉಪಸ್ಥಿತರಿರುವರು.
ಯೋಜನೆಯ ಪ್ರಮುಖ ಅಂಶಗಳು:
ರಾಜ್ಯದಾದ್ಯಂತ 71 ತಾಲೂಕು ಮತ್ತು 11 ಜಿಲ್ಲಾ ಆಸ್ಪತ್ರೆಗಳಲ್ಲಿ ಸ್ಪೋಕ್ ಕೇಂದ್ರಗಳ ಸ್ಥಾಪನೆ
ಉಚಿತ ಇಸಿಜಿ ಪರೀಕ್ಷೆ, ಎಐ ತಂತ್ರಜ್ಞಾನ ನೆರವಿನಿಂದ ಶ್ರೀಘ್ರ ರೋಗ ನಿರ್ಣಯ. ಸ್ಪೋಕ್ ಆಸ್ಪತ್ರೆಗಳಲ್ಲಿ ತ್ವರಿತ ಚಿಕಿತ್ಸೆ ಹಾಗೂ ಎಎಲ್ಎಸ್ ಆಂಬುಲೆನ್ಸ್ ಸೇವೆ
ಹೃದಯಾಘಾತ ಚಿಕಿತ್ಸೆಗೆ ಸ್ಪೋಕ್ ಕೇಂದ್ರಗಳಲ್ಲಿ 30 ಸಾವಿರ ರೂಪಾಯಿ ಮೌಲ್ಯದ ಟೆನೆಕ್ಟೇಪ್ಲೇಸ್ ಚುಚ್ಚುಮದ್ದನ್ನು ಉಚಿತವಾಗಿ ನೀಡಲಾಗುವುದು.
ಜೀವ ರಕ್ಷಕ ಟ್ರಸ್ಟ್ ವತಿಯಿಂದ ವೈದ್ಯರು, ವೈದ್ಯಕೀಯ ಮತ್ತು ಆಂಬುಲೆನ್ಸ್ ಸಿಬ್ಬಂದಿಗೆ ಹೃದಯಾಘಾತ ತುರ್ತು ನಿರ್ವಹಣೆಯ ತರಬೇತಿ.
11 ಸೂಪರ್ ಸ್ಪೆಷಾಲಿಟಿ ಕಾರ್ಡಿಯಾಕ್ ಆಸ್ಪತ್ರೆಗಳಲ್ಲಿ ಹಬ್ ಕೇಂದ್ರಗಳ ಸ್ಥಾಪನೆ
ಆಯುಷ್ಮಾನ್ ಭಾರತ್- ಪ್ರಧಾನಮಂತ್ರಿ ಜನಾರೋಗ್ಯ- ಮುಖ್ಯಮಂತ್ರಿಗಳ ಆರೋಗ್ಯ ಕರ್ನಾಟಕ ಯೋಜನೆ ಅಡಿಯಲ್ಲಿ ಉಚಿತ ಚಿಕಿತ್ಸೆ
ಮೊದಲ ಹಂತದಲ್ಲಿ ಇದುವರೆಗೂ ಹೃದಯ ಸಂಬಂಧಿತ ಗಂಭೀರ 2088 ರೋಗಿಗಳನ್ನು ಸ್ಪೋಕ್ ಕೇಂದ್ರಗಳಲ್ಲಿ ಪತ್ತೆ ಹಚ್ಚಿ ಹಬ್ ಆಸ್ಪತ್ರೆಗಳಲ್ಲಿ ಯಶಸ್ವಿ ಚಿಕಿತ್ಸೆ ನೀಡಲಾಗಿದೆ.
ಆಸ್ಪತ್ರೆಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಸ್ವಯಂಚಾಲಿತ ಬಾಹ್ಯ ಡಿಫಿಬ್ರಿಲೇಟರ್(ಎಇಡಿ) ಅಳವಡಿಸಲಾಗುವುದು.